ಪ್ರಮುಖ ಸುದ್ದಿ
ಅಯೋಧ್ಯ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಜಾಮಿಯತ್
ನವದೆಹಲಿಃ ಅಯೋಧ್ಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈಚೆಗೆ ನೀಡಿದ್ದ ಅಂತಿಮ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆ ಜಾಮಿಯತ್ ಉಲೇಮಾ-ಎ-ಹಿಂದ್ ಸೋಮವಾರ ತೀರ್ಪು ಕುರಿತು ಪುನರ್ ಪರಿಶೀಲನೆ ನಡೆಸಬೇಕೆಂದು ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ, ಸಾಕ್ಷಿಗಳು ಹಾಗೂ ತರ್ಕದ ಆಧಾರದ ಮೇಲೆ ತೀರ್ಪು ಬಂದಿಲ್ಲ.
ಒಂದು ವೇಳೆ ತೀರ್ಪು ಕುರಿತು ಕೋರ್ಟ್ ಎತ್ತಿ ಹಿಡಿದಲ್ಲಿ ಅದಕ್ಕೆ ಬದ್ಧರಾಗಲಿದ್ದೇವೆ ಎಂದ ಅವರು, ದೇಗುಲವನ್ನು ಕೆಡವಿ ಮಸೀದಿ ಕಟ್ಟಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ಒದಗಿಸಿಲ್ಲ. ಅಲ್ಲದೆ ಈ ಕುರಿತು ಕೋರ್ಟ್ ಹೇಳಿದೆ.
ಹೀಗಾಗಿ ಅಂತಿಮ ತೀರ್ಪು ವ್ಯತಿರಿಕ್ತವಾಗಿದೆ. ಹೀಗಾಗಿ ಪಿನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.