ಮೋದಿ ಮೇಲೆ ಪುಷ್ಪದಳ ಮಳೆಗರಿದ ಅನ್ಸಾರಿ.! ಈ ಅನ್ಸಾರಿ ಯಾರು ಗೊತ್ತಾ.?
ಅಯೋಧ್ಯೆಯಲ್ಲಿ ಮೋದಿಗೆ ಅದ್ದೂರಿ ಸ್ವಾಗತ
ಮೋದಿ ಮೇಲೆ ಪುಷ್ಪದಳ ಮಳೆಗರಿದು ಸ್ವಾಗತಿಸಿದ ಅನ್ಸಾರಿ
ಈ ಅನ್ಸಾರಿ ಯಾರು ಗೊತ್ತಾ.?
ಅಯೋಧ್ಯೆಃ ರಾಮಜನ್ಮಭೂಮಿ ಭೂವಿವಾದ ಪ್ರಕರಣದಲ್ಲಿ ಬಾಬ್ರಿ ಮಸೀದಿ ಪರ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿ, ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಆಗಮಿಸಿ ರೋಡ್ ಶೋ ನಡೆಸುವ ವೇಳೆ ಪುಷ್ಪದಳ ಮಳೆಗರಿದು ಸ್ವಾಗತಿಸುವ ಮೂಲಕ ಗಮನ ಸೆಳೆದಿದ್ದಾರೆ.
ಅಲ್ಲದೆ ಅಯೋಧ್ಯೆಯಲ್ಲಿ ಮೋದಿ ಅವರಿಂದಾಗಿ ನಗರಾಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪವಿತ್ರ ನಗರಕ್ಕೆ ಬಂದಿಳಿದ ಮೋದಿಯವರಿಗೆ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಹರ್ಷೋದ್ಗಾರ, ಹೂವಿನ ಸುರಿಮಳೆಗೈದು ಭವ್ಯ ಸ್ವಾಗತ ನೀಡಿದರು.
ಈ ವೇಳೆ ಇಕ್ಬಾಲ್ ಅನ್ಸಾರಿ ಕೂಡ ಮೋದಿ ರೋಡ್ ಶೋ ಸಾಗುವ ಮಾರ್ಗಮಧ್ಯೆ ಕೈಯಲ್ಲಿ ಗುಲಾಬಿ ಹೂವಿನ ದಳಗಳನ್ನು ಹಿಡಿದು ಮೋದಿ ಅವರ ಮೇಲೆ ವೃಷ್ಟಿಗರೆದಿದ್ದಾರೆ.
ಮೋದಿ ನಮ್ಮ ಪ್ರಧಾನಿ. ನಮ್ಮೂರಿಗೆ ಬಂದ ಅತಿಥಿ. ಹೀಗಾಗಿ ನಮ್ಮ ಮನೆ ಮುಂದೆ ಅವರು ಬಂದಾಗ ಹೂಮಳೆ ಸುರಿಸಿದೆ. ಇದಕ್ಕೆ ನನ್ನ ಕುಟುಂಬಸ್ಥರೂ ಸಾಥ್ ನೀಡಿದರು.
– ಅನ್ಸಾರಿ. ಅಯೋಧ್ಯೆ.