ಪ್ರಮುಖ ಸುದ್ದಿ
ಮೋದಿ ಸರ್ಕಾರದಿಂದ ದಲಿತರಿಗೆ ದ್ರೋಹ – ಮಾಜಿ ಸಿಎಂ ಸಿದ್ಧರಾಮಯ್ಯ ಸರಣಿ ಟ್ವೀಟ್!
ಬೆಂಗಳೂರು : ಬಾಯಿ ಬಡಾಯಿಯಿಂದ ದಲಿತರ ಉದ್ಧಾರ ಅಸಾಧ್ಯ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 7 ಮೀಸಲು ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಆದರೆ, ಒರ್ವ ದಲಿತ ಸಂಸದನಿಗೂ ಸಚಿವ ಸ್ಥಾನ ಮಾತ್ರ ನೀಡಿಲ್ಲ. ಇದಕ್ಕಿಂತ ದೊಡ್ಡ ಅನ್ಯಾಯ, ದ್ರೋಹ ಏನಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡುವ ಮೂಲಕ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ದಲಿತರ ಬಗ್ಗೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಾಳಜಿ ಮತ್ತು ಬದ್ಧತೆ ಇದ್ದರೆ ಮೊದಲು ರಾಷ್ಟ್ರ ಮಟ್ಟದಲ್ಲಿ ಎಸ್ ಸಿಪಿ – ಟಿಎಸ್ ಪಿ ಕಾಯ್ದೆಯನ್ನು ಜಾರಿಗೆ ತರುವ ಧೈರ್ಯ ತೋರಿಸಲಿ ಎಂದು ಸಿದ್ಧರಾಮಯ್ಯ ಸವಾಲು ಹಾಕಿದ್ದಾರೆ.