ಬಸವಭಕ್ತಿ
ವಿನಯವಾಣಿ ವಚನ ಸಿಂಚನ : ಆತ್ಮಸೂತಕದಿಂದ ಅಲಂಕರಿಸಿ ಕೆಟ್ಟವರು…
ಕುಲಗೋತ್ರಜಾತಿಸೂತಕದಿಂದ
ಕೆಟ್ಟವರೊಂದು ಕೋಟ್ಯಾನುಕೋಟಿ.
ಜನನಸೂತಕದಿಂದ ಕೆಟ್ಟವರು ಅನಂತಕೋಟಿ.
ಮಾತಿನಸೂತಕದಿಂದ ಮೋಸವಾದವರು
ಮನು ಮುನಿಸ್ತೋಮ ಅಗಣಿತಕೋಟಿ.
ಆತ್ಮಸೂತಕದಿಂದ ಅಹಂಕರಿಸಿ ಕೆಟ್ಟವರು
ಹರಿಹರ ಬ್ರಹ್ಮಾದಿಗಳೆಲ್ಲರು.
‘ಯದ್ದೃಷ್ಟಂ ತನ್ನಷ್ಟಂ’ ಎಂಬುದನರಿಯದೆ
ಹದಿನಾಲ್ಕುಲೋಕವೂ ಸಂಚಿತಾಗಾಮಿಯಾಗಿ
ಮರಳಿ ಮರಳಿ ಹುಟ್ಟುತ್ತಿಪ್ಪರಯ್ಯ.
ಇಂತೀ ಸೂತಕದ ಪ್ರಪಂಚ ಬಿಡಲಾರದ ಪಾಷಂಡಿ ಮರುಳುಗಳಿಗೆ
ಪರಬ್ರಹ್ಮ ದೊರಕುವದೆ ಅಯ್ಯಾ ?
ಇದು ಕಾರಣ, ನಾಮರೂಪುಕ್ರೀಗಳಿಗೆ ಸಿಲ್ಕುವನಲ್ಲವಯ್ಯ.
ಅಗಮ್ಯ ಅಪ್ರಮಾಣ ಅಗೋಚರವಯ್ಯ.
ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲರಾಜೇಶ್ವರಲಿಂಗವಲ್ಲದೆ ಉಳಿದವರಿಗಿಲ್ಲವೆಂಬೆನು.
-ಬಾಚಿಕಾಯಕದ ಬಸವಣ್ಣ