ಶಿವಸೇನಾ ಸಂಸ್ಥಾಪಕ ಬಾಳಾಠಾಕ್ರೆ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಕಿ!
ಮುಂಬೈ: ಶಿವಸೇನಾ ಸಂಸ್ಥಾಪಕ, ಕಟ್ಟರ್ ಹಿಂದುವಾದಿ ಬಾಳಾಠಾಕ್ರೆ ಅವರ ಜೀವನ ಚರಿತ್ರೆ ಆಧಾರಿತ ಸಿನೆಮಾ ತೆರೆ ಮೇಲೆ ಬರಲಿದೆ. ಬಾಲಿವುಡ್ ನಟ ನವಾಜುದ್ದೀನ್ ಸಿದ್ದಕಿ ಅವರು ಬಾಳಾಠಾಕ್ರೆ ಅವರ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಮರಾಠಿ ಹಾಗೂ ಹಿಂದಿ ಭಾಷೆಯಲ್ಲಿ ನಿರ್ಮಾಣ ಆಗಲಿರುವ ಸಿನೆಮಾ ಆಂಗ್ಲ ಭಾಷೆಗೂ ಡಬ್ಬಿಂಗ್ ಆಗಲಿದೆ.
ಕಳೆದ ಗುರುವಾರ ಚಿತ್ರದ ಟೀಸರ್ ರಿಲೀಸ್ ಆಗಿದೆ. ಖ್ಯಾತನಟ ಅಮಿತಾಬ್ ಬಚ್ಚನ್, ಬಾಳಾಠಾಕ್ರೆ ಅವರ ಪುತ್ರ, ಶಿವಸೇನಾ ಅದ್ಯಕ್ಷ ಉದ್ಭವ ಠಾಕ್ರೆ ಅವರು ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ನಟ ನವಾಜುದ್ದೀನ್ ಅವರು ಬಾಳಾ ಠಾಕ್ರೆ ಅವರ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಲಭಿಸಿದ್ದಕ್ಕೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.
ಸಿನಿ ತಂಡ ಅಂದುಕೊಂಡಂತೆ ಆದರೆ 2019ರ ಜನೇವರಿ 23ಕ್ಕೆ ಬಾಳಾಠಾಕ್ರೆ ಅವರ 93 ನೇ ಜನುಮ ದಿನದ ವೇಳೆಗೆ ಚಿತ್ರ ನಿರ್ಮಾಣ ಪೂರ್ಣವಾಗಲಿದೆ. ಠಾಕ್ರೆ ಅವರ ಜನ್ಮದಿನದಂದೇ ಅವರ ಜೀವನಾಧಾರಿತ ಸಿನೆಮಾ ಬಿಡುಗಡೆಗೊಳ್ಳಲಿದೆ ಎಂದು ಸಿನಿ ತಂಡ ಅಭಿಪ್ರಾಯಪಟ್ಟಿದೆ.