ಪ್ರಮುಖ ಸುದ್ದಿ
ವಿಧಾನಸಭೆಯ ಮಾಜಿ ಸಭಾಪತಿ ಬಿ.ಜಿ.ಬಣಕಾರ ವಿಧಿವಶ
ಹಾವೇರಿ : ಹಿರೇಕೆರೂರು ಪಟ್ಟಣದ ನಿವಾಸದಲ್ಲಿ ವಿಧಾನಸಭೆಯ ಮಾಜಿ ಸಭಾಪತಿ ಬಿ.ಜಿ.ಬಣಕಾರ(92) ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಣಕಾರ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಬಣಕಾರ ಅವರು ಹಿರೇಕೆರೂರು ಕ್ಷೇತ್ರದಿಂದ ಮೂರು ಸಲ ಶಾಸಕರಾಗಿದ್ದರು. 1972ರಲ್ಲಿ ಕಾಂಗ್ರೆಸ್ಸಿನಿಂದ ಶಾಸಕರಾಗಿದ್ದರು. 1983ರಲ್ಲಿ ಪಕ್ಷೇತರ ಮತ್ತು 1985ರಲ್ಲಿ ಜನತಾದಳದಿಂದ ಶಾಸಕರಾಗಿದ್ದರು.
ದೇವರಾಜ ಅರಸು ಸಂಪುಟದಲ್ಲಿ ಪಶುಸಂಗೋಪನಾ ಸಚಿವರಾಗಿ, ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ವಿಧಾನಸಭೆಯ ಸಭಾಪತಿಯಾಗಿ ಬಣಕಾರ ಅವರು ಕಾರ್ಯ ನಿರ್ವಹಿಸಿದ್ದರು. ಹಿರೇಕೆರೂರು ಕ್ಷೇತ್ರದ ಬಿಜೆಪಿ ಶಾಸಕ ಯು.ಬಿ.ಬಣಕಾರ ಸೇರಿದಂತೆ ಮೂವರು ಪುತ್ರರು ಇಬ್ಬರು ಪುತ್ರಿಯರನ್ನು ಬಿ.ಜಿ.ಬಣಕಾರ ಅವರು ಅಗಲಿದ್ದಾರೆ.