ಪ್ರಮುಖ ಸುದ್ದಿಬಸವಭಕ್ತಿ

ಸೂಫಿ ಸಂತ ಬಂದೇನವಾಜರ ವಂಶಸ್ಥ ಡಾ.ಸಯ್ಯದ್ ಷಾ ಇನ್ನಿಲ್ಲ, ಭಕ್ತರಲ್ಲಿ ಮಡುಗಟ್ಟಿದ ದುಃಖ

ಕಲಬುರಗಿ ಖಾಜಾ ಬಂದೆನವಾಜ್ ದರ್ಗಾದ ಪೀಠಾಧಿಪತಿ ವಿಧಿವಶ

ಕಲಬುರಗಿ ಖಾಜಾ ಬಂದೆನವಾಜ್ ದರ್ಗಾದ ಪೀಠಾಧಿಪತಿ ವಿಧಿವಶ

ಸೂಫಿ ಸಂತ ಬಂದೇನವಾಜರ ವಂಶಸ್ಥ ಡಾ.ಸಯ್ಯದ್ ಷಾ ಇನ್ನಿಲ್ಲ, ಭಕ್ತರಲ್ಲಿ ಮಡುಗಟ್ಟಿದ ದುಃಖ

ಕಲ್ಬುರ್ಗಿಃ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧ ಹೊಂದಿದ್ದ ಧಾರ್ಮಿಕ ಕ್ಷೇತ್ರವಾದ ಖಾಜಾ ಬಂದೇನವಾಜ್ ದರ್ಗಾದ ಪೀಠಾಧಿಕಾರಿ ಮುತ್ಸದ್ಧಿ ಡಾ.ಸಯ್ಯದ್ ಷಾ ಖ್ರುಸ್ರೋ ಹುಸೈನಿ ಸಾಹೇಬ (79) ಅವರು ಇಂದು ವಯೋಸಹಜವಾಗಿ ನಿಧನ ಹೊಂದಿದ್ದಾರೆ.

ಇವರು ಇಬ್ಬರು ಗಂಡು ಮತ್ತು ಮೂವರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ವರ್ಗ ಅಸಂಖ್ಯಾತ ಭಕ್ತವರ್ಗವನ್ನು ಅಗಲಿದ್ದಾರೆ.

ಪ್ರಸಿದ್ಧ ಸೂಫಿ ಸಂತ ಹಜರತಗ ಖಾಜಾ ಬಂದೇನವಾಜ್ ಅ 23 ನೇ ವಂಶಸ್ಥರಾಗಿದ್ದು, ಇವರು ಆಳವಾದ ಆಧ್ಯಾತ್ಮಿಕ ಜ್ಞಾನವನ್ನು ಹೊಂದಿದ್ದರು.

ಅಲ್ಲದೆ ಶೈಕ್ಷಣಿಕ ತಜ್ಞರು ಮತ್ತು ನ್ಯಾಯವಾದಿ ಆಗಿದ್ದ ಇವರು KBN ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಆಧುನಿಕ ತಂತ್ರಜ್ಞಾನದೊಂದಿಗೆ ಸೂಫಿ ಪರಂಪರೆಯ ಸೇತುವೆ ಆಗಿ ನಿರಂತರವಾಗಿ ದೇಶದ ವಿವಿಧ ಭಾಗಗಳಲ್ಲಿ ಇಂದಿನ ಪೀಳಿಗೆಗಳಿಗೆ ಸೂಫಿ ಪರಂಪರೆಯನ್ನು ತಿಳಿಸುವ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.

ಅವರ ಬದುಕು ಉತ್ತಮ ಸಂಸ್ಕಾರ, ಸಂಸ್ಕೃತಿಯಿಂದ ಕೂಡಿತ್ತು. ಅವರ ಪೂರ್ವಜರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದರು. ಗುರುಗಳ ನಿಧನದಿಂದ ಅವರ ಅಪಾರ ಅನುಯಾಯಿ ಮತ್ತು ಸೂಫಿ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಅವರ ಅಗಲಿಕೆ ಉತ್ತರ ಕರ್ನಾಟಕ ಭಾಗಕ್ಕೆ ನಷ್ಟ ಉಂಟಾಗಿದೆ ಎಂದು ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಅಲ್ಲದೆ ಅವರು ಬದುಕಿನುದ್ದಕ್ಕೂ ಸಾಮರಸ್ಯದಿಂದ ಬಾಳಿ ಬದುಕಿದವರು ಎಲ್ಲೂ ರಾಜಕೀಯ ಗಾಳಿ ಸೋಕದೆ ಅಪ್ಪಟ ಧಾರ್ಮಿಕತೆಯ ಸಂತರಂತೆ ಜೀವನ‌ನಡೆಸಿದವರು. ಯಾವುದೆ ವಿವಾದದ ಸುಳಿಗೆ ಸಿಗದೆ ಆಧ್ಯಾತ್ಮವನ್ನು ರೂಢಿಸಿಕೊಂಡಿದ್ದರು. ಬಂದ ಭಕ್ತರಿಗೆ ಸನ್ಮಾರ್ಗವನ್ನು ತೋರುವವರಾಗಿದ್ದರು.

ಹೀಗಾಗಿ ಭಕ್ತರಲ್ಲಿ ದುಃಖ ಮಡುಗಟ್ಟಿದೆ. ಬೀದರ, ರಾಯಚೂರ, ವಿಜಯಪುರದಿಂದ ಭಕ್ತರು‌ ಅವರ ದರ್ಶನಕ್ಕಾಗಿ ಆಗಮಿಸುತ್ತಿರುವದು ಅವರಲ್ಲಿದ್ದ ವಿಶೇಷತೆಯ ಆಧ್ಯಾತ್ಮಿಕ ಗುಣವನ್ನು ಸಾಕ್ಷಿಕರಿಸುತ್ತದೆ. ಹಿಂದೂ ಮುಸ್ಲಿಂ ಎಲ್ಲ ಸಮುದಾಯದ ಭಕ್ತರು ದರ್ಶನ ಪಡೆಯಲು ಜನಸ್ತೋಮವೇ ಸೇರುತ್ತಿದೆ.

Related Articles

Leave a Reply

Your email address will not be published. Required fields are marked *

Back to top button