ಪ್ರಮುಖ ಸುದ್ದಿ

ಶಹಾಪುರದಲ್ಲಿ “ಹುಲಿಬೇಟೆ” ಆರಂಭ.!

ರಾಜ್ ಬಹದ್ದೂರ್ ನಿರ್ದೇಶನ, ಧನಪಾಲ್ ಛಾಯಾಗ್ರಹಣ

ಯಾದಗಿರಿ, ಶಹಾಪುರಃ ಶಹಾಪುರದಲ್ಲಿ ಹುಲಿ ಬೇಟೆ ಹುಲಿ ಎಲ್ಲಿಂದ ಶಹಪುರಕ್ಕೆ ಬಂದಿದೆ.? ಶಹಾಪುರದಲ್ಲಿ ಅಂತಹ ಕಾನನವೆಲ್ಲಿದೆ ಎಂದು ಹುಬ್ಬೇರಿಸಬೇಡಿ. ಹುಲಿಬೇಟೆ ಎಂಬುದು ಹೊಸ ಚಲನಚಿತ್ರದ ಟೈಟಲ್. ಈ ಚಿತ್ರದ ಚಿತ್ರೀಕರಣ ನಗರದ ಚರಬಸವೇಶ್ವರ ಗದ್ದುಗೆಯಲ್ಲಿ ಚಾಲನೆ ನೀಡಲಾಯಿತು.

ಚಲನಚಿತ್ರಗಳು ಕೇವಲ ಮನರಂಜನೆ ನೀಡುವ ಮಾಧ್ಯಮವಲ್ಲ. ಅದು ಸಮಾಜದಲ್ಲಿ ಕೆಲ ಅಂಶಗಳನ್ನೆ ತೆಗೆದುಕೊಂಡು ಸಾಂರ್ಧಭಿಕವಾಗಿ ಚಿತ್ರಿಸಿ ಜನಸಾಮಾನ್ಯರಿಗೆ ಉತ್ತಮ ಸಂದೇಶ ನೀಡುವ ಮಾಧ್ಯಮ ಎಂದರೆ ತಪ್ಪಾಗಲಾರದು ಎಂದು ತಹಶೀಲ್ದಾರ್ ಸಂಗಮೇಶ ಜಿಡಗೆ ತಿಳಿಸಿದರು.

ನಗರದ ಮಹಾತ್ಮ ಚರಬಸವೇಶ್ವರ ಗದ್ದುಗೆ ಆವರಣದಲ್ಲಿ ನಡೆದ ಹುಲಿಬೇಟೆ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಚಲನಚಿತ್ರಗಳು ಚಿತ್ರೀಕರಣವಾಗುವುದು ಬಹುತೇಕ ಬಹಳ ಕಡಿಮೆ ಹೀಗಿರುವಾಗ ಒಂದು ಚಿತ್ರ ತಂಡವು ಈ ಭಾಗದ ಕಲಾವಿದರನ್ನೆ ಆಯ್ದುಕೊಂಡು ಸಿನಿಮಾವನ್ನು ಚಿತ್ರೀಕರಿಸುವ ಸುದ್ದಿ ಕೇಳಿ ಸಂತಸವಾಯಿತು.

ಚಲನಚಿತ್ರಗಳು ಎಂದರೆ ಅವು ದುಡ್ಡು ಮಾಡಲು, ಮನರಂಜನೆ ನೀಡಲು ಮಾತ್ರ ಎಂದು ಕೊಳ್ಳಬಾರದು. ಸಿನಿಮಾಗಳು ಈ ಸಮಾಜವನ್ನು ಬದಲಾಯಿಸುವ ಅಘಾದವಾದ ಶಕ್ತಿಯುಳ್ಳ ಒಂದು ಶಕ್ತಿಶಾಲಿಯಾದ ಕ್ಷೇತ್ರವದು. ಹೊಸ ಕಲಾವಿದರನ್ನ ಹಾಕಿಕೊಂಡು ಹುಲಿಬೇಟೆ ಸಿನಿಮಾ ನಿರ್ಮಿಸುತ್ತಿರುವ ಧಾನುಬಾಯಿ ಸಿನಿಮಾಸ್ ಕಲಾವಿದರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.

ಸಿಪಿಐ ಹನುಮರೆಡ್ಡೆಪ್ಪ ಮಾತನಾಡಿ, ಸಿನಿಮಾ ಎಂದರೆ ಅದು ಪ್ರತಿಯೊಬ್ಬರನ್ನು ಕ್ಷಣ ಮಾತ್ರದಲ್ಲಿ ಸೆಳೆದು ಬಿಡುವ ಕ್ಷೇತ್ರವದು. ಆದರೆ ಅಲ್ಲಿ ನಿಜವಾದ ಕಲೆಯಿದ್ದವರು ಮಾತ್ರ ಕೆಲಸ ಮಾಡಲು ಸಾಧ್ಯ. ಕಲಾಶಕ್ತಿ ಇದ್ದರೆ ಮಾತ್ರ ಸಿನಿಮಾ ನಿರ್ಮಿಸಲು, ನಿರ್ದೇಶಿಸಿಲು, ಚಿತ್ರೀಕರಿಸಲು, ನಟಿಸಲು ಸಾಧ್ಯ ಹೊಸ ತಂಡದೊಂದಿಗೆ ಸಾಗುತ್ತಿರುವ ಹುಲಿಬೇಟೆ ಸಿನಿಮಾವು ಎಲ್ಲಾ ಕಲಾವಿದ, ತಂತ್ರಜ್ಞರಿಗೆ ಒಳ್ಳೆ ಬದುಕನ್ನ ರೂಪಿಸಲಿ ಎಂದು ಹಾರೈಸಿದರು.

ವೀರಮಹಾಂತ ಶಿವಾಚಾರ್ಯರು ಹಿರೇಮಠ ದೋರನಹಳ್ಳಿ, ಗದ್ದುಗೆಯ ಬಸವಯ್ಯ ಶರಣರು ಸಾನಿಧ್ಯವಹಿಸಿದ್ದರು. ನಿರ್ದೇಶಕ ರಾಜ್ ಬಹದ್ದೂರ್, ಛಾಯಾಗ್ರಾಹಕ ಧನಪಾಲ್, ನಾಯಕ ನಟ ವಿಶ್ವ, ಖಳನಾಯಕ ಮಂಜುಸ್ವಾಮಿ ಸೇರಿದಂತೆ ಇತರೆ ಕಲಾವಿದರು ಇದ್ದರು.

Related Articles

Leave a Reply

Your email address will not be published. Required fields are marked *

Back to top button