ಪ್ರಮುಖ ಸುದ್ದಿ

ಬೆಂಗಳೂರು ನಂ.1 ರೇಪ್ ಸಿಟಿಃ ಎನ್‍ಸಿಬಿ ಸಮೀಕ್ಷೆಯಿಂದ ಬಹಿರಂಗ

ಕೃಷ್ಣೆಗೆ 10 ಸಾವಿರ ಕೋಟಿ ನೀಡುವ ವಾಗ್ದಾನ ಮರೆತವರಾರು.?

ಬೀದರಃ ಕಾಂಗ್ರೆಸ್ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಬೀದರಃಬೆಂಗಳೂರ ದೇಶದಲ್ಲಿಯೇ ನಂ.1 ಅಪರಾಧ ತಾಣ. ಭಯಾನಕ ಅಪರಾಧಗಳು ಬೆಂಗಳೂರಿನಲ್ಲಿಯೇ ನಡೆದಿವೆ. ಭಯಾನಕ ಕ್ರೈಂಗಳಿಂದ ಜನ ಹೊರ ಬರಲು ಹೆದರುವಂತಗಾಗಿದೆ. ಅಪರಾಧ ತೀವ್ರತೆಯಿಂದಾಗಿ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ಪರಿವರ್ತನಾ ಯಾತ್ರೆ ನಿಮಿತ್ತ ಆಗಮಿಸಿದ್ದ ಅವರು, ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರ ನಗರ ದೇಶದಲ್ಲಿಯೇ ನಂ.1 ರೇಪ್ ಸಿಟಿಯಾಗಿದೆ. ಆದರೆ ಮುಖ್ಯಮಂತ್ರಿ ಸಿದ್ರಾಮಯ್ಯ ಮತು ಜಿ.ಪರಮೇಶ್ವರ ದೇಶದಲ್ಲಿಯೇ ಬೆಂಗಳೂರ ಸೇಫ್ ಸಿಟಿ ಎಂದು ಬೊಗಳೆ ಬಿಡುತ್ತಿದ್ದಾರೆ ಎಂದು ಕುಟುಕಿದರು.

ನಿತ್ಯ ಅತ್ಯಾಚಾರ, ಕಳುವು, ಕೊಲೆ ಸುಲಿಗೆಯಂತಹ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆಲ್ಲ ಕಡಿವಾಣ ಹಾಕುವ ಗೋಜಿಗೆ ಹೋಗದ ರಾಜ್ಯ ಸರ್ಕಾರ ಗಾಢ ನಿದ್ರೆಯಲ್ಲಿ ಜಾರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

371 (ಜೆ)ಯಿಂದ ಹೈಕ ವಿಕಸನದ ಬಗ್ಗೆ ಶ್ವೇತಪತ್ರ ಹೊರಡಿಸಿಲಿ.!

ಹೈದ್ರಾಬಾದ್ ಕರ್ನಾಟಕಕ್ಕೆ 371(ಜೆ) ಜಾರಿಯಾದಗಿನಿಂದಲೂ ಉತ್ತಮ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳುವ ರಾಜ್ಯ ಸರ್ಕಾರ, ಹೈಕ ವಿಕಸನ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ ಸವಾಲು ಹಾಕಿದರು.

ಅಲ್ಲದೆ ಈ ಭಾಗದ ಕೃಷ್ಣಾ ಕಾಡಾ ಅಭಿವೃದ್ಧಿಗೆ ಪ್ರತಿವರ್ಷ 10 ಸಾವಿರ ಕೋಟಿ ಕೊಡುತ್ತೇನೆ ಎಂದು ಕೃಷ್ಣೆ ಮೇಲೆ ಆಣೆ ಮಾಡಿ ಹೇಳಿದ್ದ ಸಿಎಂ ಸಿದ್ರಾಮಯ್ಯ, ಐದು ವರ್ಷಗಳಲ್ಲಿ ಕೊಟ್ಟಿದ್ದು, ಬರಿ 6 ಸಾವಿರದ 4 ನೂರು ಕೋಟಿ ಮಾತ್ರ.

ಮತ್ತೆ ಸಿಎಂ ಅವರು, ರಾಜ್ಯಕ್ಕೆ ಮರಳನ್ನು ತರಲು ಹೊರಟಿದ್ದಾರೆ. ಮಲೇಶಿಯಾದಿಂದ ರಾಜ್ಯಕ್ಕೆ ಮರಳು ತರಲು ಹೊರಟಿದ್ದಾರೆ. ರಾಜ್ಯದಲ್ಲಿರುವ ಮರಳನ್ನು ತಮ್ಮ ಮಂತ್ರಿಗಳ ಮಕ್ಕಳಿಂದ ಲೂಟಿ ಮಾಡಲು ಬಿಟ್ಟು, ಇತ್ತ ಬೇರೆ ದೇಶದಿಂದ ಮರಳು ತರಲು ಹೊರಟಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಕೇಳಿದರು.

ಕಮಿಷನ್ ದಂಧೆಗೆ ಸಿಎಂ ಅವರು ಏನು ಬೇಕಾದರೂ ಮಾಡಲು ಸಿದ್ಧವಾಗಿದ್ದಾರೆ. ಸರ್ಕಾರದ ಹಣ ಲೂಟಿಗೆ ಸಿದ್ರಾಮಯ್ಯ ಎಲ್ಲಾ ತಂತ್ರಗಳನ್ನು ರೂಪಿಸಿದ್ದಾರೆ ಎಂದು ಆರೋಪಿಸಿದರು.

Related Articles

Leave a Reply

Your email address will not be published. Required fields are marked *

Back to top button