ಪ್ರಮುಖ ಸುದ್ದಿ

ಬೆಂಗಳೂರಿಗೆ ಬ್ರಿಟನ್ ವೈರಸ್ ಲಗ್ಗೆಃ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

ಬೆಂಗಳೂರಿಗೆ ಬ್ರಿಟನ್ ವೈರಸ್ ಲಗ್ಗೆಃ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

ಬೆಂಗಳೂರಃ ಭಾರತದಲ್ಲಿ 6 ಬ್ರಿಟನ್ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ.

14 ಜನ ಬ್ರಿಟನ್ ನಿಂದ ಭಾರತಕ್ಕೆ‌ ಬಂದಿದ್ದ ಅವರನ್ನು ಪರೀಕ್ಷಿಸಿಲಾಗಿ ಅದರಲ್ಲಿ 6 ಜನರಿಗೆ ಬ್ರಟನ್ ರಾಕ್ಷಸನನ್ನು ಕೊರೊನಾ ತಗುಲಿದೆ ಎಂಬ ಮಾಹಿತಿ ನೀಡಿದ್ದು, ಅದರಲ್ಲಿ ಬೆಂಗಳೂರ-3, ಹೈದ್ರಬಾದ್-2 ಮತ್ತು ಪುಣೆ -1 ಕೊರೊನಾ ರಾಕ್ಷಸ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಬೆಂಗಳೂರಿಗೆ ಕಾಲಿಟ್ಟ ಈ ಬ್ರಿಟನ್ ಮಹಾಮಾರಿ ಹೈಸ್ಪೀಡ್‌ ಕೊರೊನಾ ತನ್ನ ಆರ್ಭಟ ಶುರು ಮಾಡಲಿದೆ.

ಮೊದಲಿನ ಕೊರೊನಾ ಮಹಾಮಾರಿಕ್ಕಿಂತ ಶೇ.70 ರಷ್ಟು ಈ ಹೊಸ ಪ್ರಭೇದ ಕೊರೊನಾದ್ದಾಗಿದ್ದು, ಕಾರಣ‌ ಎಲ್ಲರೂ ಎಚ್ಚರಿಕೆವಹಿಸುವ ಅಗತ್ಯವಿದೆ. ಬೆಂಗಳೂರಿಗರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸರ್ಕಾರದ ಗೈಡ್‌ಲೈನ್ ಚಾಚು ತಪ್ಪದೆ ಪಾಲಿಸಬೇಕು.

ಅದರಲ್ಲೂ ಹೊಸ ವರ್ಷದ ಹೊಸ್ತಿಲಲ್ಲಿ ಬೆಂಗಳೂರ‌ ನಗರಕ್ಕೆ ಮಹಾಮಾರಿ ಬ್ರಿಟನ್ ಕೊರೊನಾ ಕಾಲಿಟ್ಟಿದ್ದು ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು‌ ಮಾಧ್ಯಮ ನಾಗರಿಕರಿಗೆ ಎಚ್ಚರಿಕೆವಹಿಸುತ್ತಿದೆ.

ಹೊಸ ಆಚರಣೆ ಸಂಭ್ರಮದಲ್ಲಿ ಮೈಮರೆತರೆ ಆಪತ್ತು‌ ಗ್ಯಾರಂಟಿ. ಹೀಗಾಗಿ‌ ಅನಗತ್ಯ ಮೋಜು ಮಸ್ತಿಗೆ ಇಳಿಯದಿರುವದೇ ಸೂಕ್ತ ಎಂಬ ಸಲಹೆಯನ್ನು ವಿವಿ‌ ಕಾಳಜೀಪೂರಕವಾಗಿ‌ ನೀಡುತ್ತದೆ.‌

Related Articles

Leave a Reply

Your email address will not be published. Required fields are marked *

Back to top button