ಪ್ರಮುಖ ಸುದ್ದಿ
ಬೆಂಗಳೂರಃ ಮಳೆ ಅವಾಂತರ ಹಲವು ಜಿಲ್ಲೆಗಳಲ್ಲಿ ಶಾಲೆಗೆ ರಜೆ ಘೋಷಣೆ
ಬೆಂಗಳೂರಃ ಮಳೆ ಅವಾಂತರ ಹಲವು ಜಿಲ್ಲೆಗಳಲ್ಲಿ ಶಾಲೆಗೆ ರಜೆ
ಬೆಂಗಳೂರಃ ನಿರಂತರ ಮಳೆಯಿಂದಾಗಿ ನಾಗರಿಕರು ಕಂಗಾಲಾಗಿದ್ದು, ಬೆಂಗಳೂರ ನಗರ ಮತ್ತು ಗ್ರಾಮಾಂತರ ಎರಡು ದಿನಗಳ ಕಾಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.
ನಿರಂತರ ಮಳೆ ಹಿನ್ನೆಲೆ ರಾಜಧಾನಿ ರಸ್ತೆ ಚರಂಡಿಗಳು ತುಂಬಿ ಹರಿಯುತ್ತಿವೆ. ವ್ಯಾಪಾರ ವಹಿವಾಟುಗೆ ಪೆಟ್ಟು ಬಿದ್ದಿದೆ. ರಸ್ತೆ ಫುಟ್ ಪಾತ್ ನಲ್ಲೂ ಅಪಾರ ಪ್ರಮಾಣದಿ ನೀರು ಹರಿಯುತ್ತಿದೆ. ಹೀಗಾಗಿ ಬೆಂಗಳೂರಿಗರು ತೊಂದರೆಗೆ ಸಿಲುಕಿದ್ದಾರೆ.
ಇನ್ನೂ ಮೂರು ನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯತೆ ಇರುವ ಕಾರಣ ಸರ್ಕಾರ ಆಯಾ ಜಿಲ್ಲೆಗನುಗುಣವಾಗಿ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಬಿಟ್ಟಿದೆ.
ಹಲವು ಜಿಲ್ಲೆಗಳಲ್ಲೂ ಶಾಲಾ ಕಾಲೇಜಿಗೆ ಎರಡೆರಡು ದಿನ ರಜೆ ಘೋಷಿಅಇದ ವರದಿಗಳು ಬಂದಿವೆ. ಉಕ ಭಾಗದಲ್ಲೂ ಭಾರಿ ಮಳೆಯಾಗುವ ಸಂಭವವಿದೆ ಎನ್ನಲಾಗಿದೆ.