ಬ್ರಹ್ಮಲೀನವಾದ ನಡೆದಾಡುವ ದೇವರು- ಶಿರವಾಳ
ಬಂಜಾರ ಸಮಾಜದ ಜಗದ್ಗುರು ವಿಧಿವಶಃ ಶಿರವಾಳ ಸಂತಾಪ
yadgiri, ಶಹಾಪುರಃ ಬಂಜಾರ ಸಮಾಜದ ಆರಾಧ್ಯ ದೈವರೆನಿಸಿದ್ದ ಜಗದ್ಗುರು ಡಾ.ರಾಮರಾವ್ ಮಹಾರಾಜ್ ವಿಧಿವಶ ದೇಶಕ್ಕೆ ಅಪಾರ ನಷ್ಟ ತಂದಿದೆ. ನಡೆದಾಡುವ ದೇವರೆಂದೆ ಖ್ಯಾತಿ ಗಳಿಸಿದ ಜಗದ್ಗುರು ಡಾ.ರಾಮರಾವ್ ಮಹಾರಾಜರನ್ನು ಕಳೆದುಕೊಂಡ ದೇಶ ಬಡವಾಗಿದೆ. ಆಧ್ಯಾತ್ಮಿಕ ಸಂತ, ಮಹಾರಾಜರು, ಇಲ್ಲವೆಂಬುದು ಅರಗಿಸಿಕೊಳ್ಳುವದು ಅಸಂಖ್ಯಾತ ಜನರಿಗೆ ಆಗುತ್ತಿಲ್ಲ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿನಯವಾಣಿಯೊಂದಿಗೆ ಮಾತನಾಡಿದ ಅವರು, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಇಹಲೋಕ ತ್ಯೇಜಿಸಿದ್ದಾರೆ. ಜಗದ್ಗುರುಗಳು ಮುಂಬೈ ಬಳಿ ಪೌರಾದೇವಿಯಲ್ಲಿರುವ ಶಕ್ತಿಪೀಠದ ಜಗದ್ಗುರುಗಳು ಆಗಿದ್ದರು. ಬಂಜಾರ ಸಮಾಜ ಸೇರಿದಂತೆ ಅಪಾರ ಭಕ್ತ ಸಮೂಹವನ್ನು ಅವರು ಹೊಂದಿದ್ದರು.
ಕರ್ನಾಟಕ ಸೇರಿದಂತೆ ದೇಶದಾದ್ಯಂತ ಅಪಾರ ಭಕ್ತಕೋಟಿ ಹೊಂದಿದ್ದ ಅವರು, ದೇವರ ಸಮಾನರಾಗಿದ್ದರು, ಭಕ್ತರ ಸಂಕಟ ಪರಿಹರಿಸುವ ಧೈವಿಸಂತರಾಗಿದ್ದರು. ಧಾರ್ಮಿಕವಾಗಿ ತುಂಬ ಜನರು ಅವರನ್ನು ಅವಲಂಬಿಸಿದ್ದರು. ಅವರ ವಾಕ್ಯವೆಂದರೆ ವೇದವಾಗಿತ್ತು.
ಮಹಾರಾಜರು ಎದುರಿಗೆ ಇಲ್ಲವೆಂದರೂ ಈಗಲೂ ಅವರು ನೀಡಿದ ಆಧ್ಯಾತ್ಮಿಕ ಚಿಂತನೆ ಅವರ ಬೋಧನೆ ನಮಗೆಲ್ಲ ದಾರಿದೀಪ. ಅವರು ತೋರಿದ ಸನ್ಮಾರ್ಗದಲ್ಲಿ ನಾವೆಲ್ಲ ನಡೆಯಬೇಕು ಎಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ.