ಈ ನಾಲ್ಕು ದಿನ ಬ್ಯಾಂಕ್ ಕಾರ್ಯ ನಿರ್ವಹಿಸಲ್ಲ.!
ನಾಲ್ಕು ದಿನ ಬ್ಯಾಂಕ್ ಗಳಿಗೆ ರಜೆ ಯಾಕೆ ಗೊತ್ತೆ.?
ನವದೆಹಲಿಃ ಸಾರ್ವಜನಿಕ ರಜೆ ಮತ್ತು ಬ್ಯಾಂಕ್‍ಗಳ ಸಿಬ್ಬಂದಿ ಮುಷ್ಕರ ಹಮ್ಮಿಕೊಂಡಿರುವ ಕಾರಣ ಸೆ.26 ರಿಂದ 29ರವರೆಗೆ ನಾಲ್ಕು ದಿನಗಳ ಕಾಲ ಬ್ಯಾಂಕ್‍ಗಳ ವಹಿವಾಟು ನಡೆಯುವದಿಲ್ಲ. ಅಂದರೆ ಬ್ಯಾಂಕ್‍ಗಳು ಕಾರ್ಯನಿರ್ವಹಿಸುವದಿಲ್ಲ.
ದೇಶದ 10 ಬ್ಯಾಂಕ್‍ಗಳು ವಿಲೀನಗೊಳಿಸಲು ಮುಂದಾಗಿರುವದನ್ನು ಖಂಡಿಸಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಓಸಿ)ಮತ್ತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ ಹಾಗೂ ಇಂಡಿಯನ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ಸಂಘ ಕಾಂಗ್ರೆಸ್(ಐಎನ್‍ಬಿಒಸಿ) ಮತ್ತು ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆಗಳು 26 ಹಾಗೂ 27 ರಂದು ಮುಷ್ಕರವನ್ನು ನಡೆಸಲು ನಿರ್ಧರಿಸಿದ್ದು,
ಇದರೊಂದಿಗೆ ಸೆ.28 ನಾಳ್ಕನೇಯ ಶನಿವಾರ ಹಾಗೂ ಸೆ.29 ರಂದು ಭಾನುವಾರ ಇರುವ ಕಾರಣ ಬ್ಯಾಂಕಿಗೆ ಸಾರ್ವಜನಿಕ ರಜೆ ಇರಲಿದೆ. ಹೀಗಾಗಿ ಈ ನಾಳ್ಕು ದಿನಗಳ ಕಾಲ ಬ್ಯಾಂಕ್‍ಗಳು ಸೇವೆಗೆ ಲಭ್ಯವಿರುವದಿಲ್ಲ.
ಕಾರಣ ಸಾರ್ವಜನಿಕ ಈ ನಾಲ್ಕು ದಿನಗಳನ್ನು ಹೊರತು ಪಡಿಸಿ ಮುಂಚಿತವಾಗಿ ಇಲ್ಲವೇ ತದನಂತರವೇ ಬ್ಯಾಂಕ್ ವಹಿವಾಟಿಗಳನ್ನು ನಡೆಸಬೇಕಾಗುತ್ತದೆ. ಹೀಗಾಗಿ ಈ ನಾಲ್ಕು ದಿನಗಳ ಬ್ಯಾಂಕ್ ರಜೆ ಕುರಿತು ನಾಗರಿಕರು ಈಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹದು.