ಪ್ರಮುಖ ಸುದ್ದಿ

ರೈತರ ಬಾಳು ಹಸನುಗೊಳಿಸಿದ ರಾಜಕಾರಣಿ ಬಾಪುಗೌಡ – ಉಮೇಶ ಜಾಧವ್

ಒಣಭೂಮಿಗೆ ಹಸಿರುಗೊಳಿಸುವಲ್ಲಿ ಅವಿರತ ಶ್ರಮಿಸಿದ ಛಲಗಾರ

yadgiri, ಶಹಾಪುರಃ ಕಲ್ಯಾಣ ಕರ್ನಾಟಕ ಕಂಡ ಅಪರೂಪದ ರಾಜಕಾರಣಿ ದಿ.ಬಾಪುಗೌಡ ದರ್ಶನಾಪುರ. ರಾಜಕಾರಣಿಗಳಲ್ಲಿ ಅಸಾಮಾನ್ಯರಾಗಿದ್ದ ಅವರು, ಹಿಡಿದ ಕೆಲಸವನ್ನು ಛಲಬಿಡದೆ ಮಾಡುವ ವ್ಯಕ್ತಿತ್ವ ಹೊಂದಿದ್ದರು. ಈ ಭಾಗದ ನೀರಾವರಿಗೆ ನಿರಂತರ ಶ್ರಮಿಸುವ ಮೂಲಕ ಒಣಭೂಮಿಯನ್ನು ಹಸಿರಾಗಿಸಿದ ಛಲಗಾರ ಬಂಗಾರದ ಮನುಷ್ಯ ಅಂದರೆ ತಪ್ಪಿಲ್ಲ ಎಂದು ಕಲಬುರ್ಗಿ ಸಂಸದ ಉಮೇಶ ಜಾಧವ್ ಅಭಿಪ್ರಾಯಪಟ್ಟರು.

Add

ದಿ.ಬಾಪುಗೌಡ ದರ್ಶನಾಪುರ ಅವರ 32 ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಭೀಮರಾಯನ ಗುಡಿ ವೃತ್ತದಲ್ಲಿರುವ ಬಾಪುಗೌಡ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಶೋಷಿತರು ಹಾಗೂ ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದವರು. ಆ ವರ್ಗಗಳಿಗೆ ಗೌರವಯುತ ಬದುಕು ಕಟ್ಟಿಕೊಳ್ಳಲು ನೆರವಾದ ಸದಾ ಜನಪರ ಕಾಳಜಿಯುಳ್ಳ ಜನನಾಯಕರಾಗಿದ್ದರು ದಿ.ಬಾಪುಗೌಡರು. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂಲಕ ನೀರಾವರಿಗೆ ಸೌಲಭ್ಯ ಕಲ್ಪಿಸಿಕೊಡುವಲ್ಲಿ ದಿ.ಬಾಪುಗೌಡರದು ಅಪಾರ ಕೊಡುಗೆ ಇದೆ. ಅಭಿವೃದ್ಧಿಯ ಹರಿಕಾರ. ಕಲಬುರ್ಗಿ ವಿಭಾಗದಲ್ಲಿಯೇ ಶಹಾಪುರ ಅತ್ಯಂತ ಮಾದರಿ ಅಭಿವೃದ್ಧಿ ಹೊಂದಿದ ತಾಲೂಕು ಅಂದರೆ ತಪ್ಪಿಲ್ಲ. ಅದಕ್ಕೆ ಮೊದಲಿನಿಂದಲೂ ದೂರದೃಷ್ಠಿ ಹೊಂದಿದ್ದ ದಿ.ಬಾಪುಗೌಡರ ಕೈಚಳಕವಿದೆ. ಅವರೊಬ್ಬರು ಮಾದರಿ ರಾಜಕಾರಣಿಯಾಗಿದ್ದು, ಅವರ ಆದರ್ಶ ನಮಗೆಲ್ಲ ಸ್ಪೂರ್ತಿಯಾಗಿವೆ ಎಂದರು.

ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಕೊರೊನಾ ಮಹಾಮಾರಿ ಹಿನ್ನೆಲೆ ಈ ಬಾರಿ ನನ್ನ ತಂದೆಯವರ ಪುಣ್ಯಸ್ಮರಣೆ ಕಾರ್ಯಕ್ರಮ ಅದ್ದೂರಿಯಾಗಿ ಮಾಡಲಾಗಲಿಲ್ಲ. ಸರಳವಾಗಿ ಆಚರಿಸಲಾಗಿದೆ. ನಮ್ಮ ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿ ನಾನು ನಡೆಯುತ್ತಿದ್ದೇನೆ. ಅವರ ಆಶೀರ್ವಾದ ಜನರ ಪ್ರೀತಿ, ಅಭಿಮಾನ ಎಂದೂ ಮರೆಯುವದಿಲ್ಲ ಎಂದರು.

ಈ ಸಂದರ್ಭದಲ್ಲಿ ಬಸವರಾಜಪ್ಪ ಗೌಡ ದರ್ಶನಾಪುರ, ಅಮರೀಶಗೌಡ ದರ್ಶನಾಪುರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಮಲ್ಲಣ್ಣ ಮಡ್ಡಿ ಸಾಹು, ಶರಣಪ್ಪ ಸಲಾದಪುರ, ಬಸವರಾಜ ಹಿರೇಮಠ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಭೀಮಣ್ಣ ಇಟಗಿ, ಶಂಕ್ರಣ್ಣ ವಣಿಕ್ಯಾಳ, ಬಸವರಾಜ ಹೇರುಂಡಿ, ಗುಂಡಪ್ಪ ತುಂಬಿಗಿ, ಸಣ್ಣ ನಿಂಗಪ್ಪ ನಾಯ್ಕೋಡಿ, ಮಹಾದೇವಪ್ಪ ಸಾಲಿಮನಿ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button