ಕಳೆದುಕೊಂಡ ಹೆತ್ತವರನ್ನು ಮತ್ತೊಬ್ಬರಲ್ಲಿ ಕಾಣುವದೇ ಪುಣ್ಯಸ್ಮರಣೆ-ಮಂಟೂರ
ಬೃಹತ್ ಆರೋಗ್ಯ ಶಿಬಿರ
ಆರು ಯೋಗ್ಯವೇ ಆರೋಗ್ಯ ಈಶ್ವರ ಮಂಟೂರ
ಯಾದಗಿರಿ, ಶಹಾಪುರಃ ಮಾಂಸದ ಮುದ್ದೆಯಂತಿರುವ ನಮ್ಮಲ್ಲಿ ಸಂಸ್ಕಾರದ ಬೀಜವನ್ನು ಬಿತ್ತಿದವರು ನಮ್ಮನ್ನು ಹೆತ್ತವರು. ಹೆತ್ತವರ ಋಣ ಎಂದಿಗೂ ತೀರಿಸಲು ಅಸಾಧ್ಯವಾದ ಮಾತು. ಅವರು ನಮ್ಮನ್ನು ಹೆತ್ತು ಹೊತ್ತು ಉತ್ತಮ ಶಿಕ್ಷಣ ನೀಡಿ ಶಿಕ್ಷಕ, ಸೈನಿಕ, ವೈದ್ಯರಾಗಲಿ ಎಂದು ಉನ್ನತಮಟ್ಟಕ್ಕೆ ಬೆಳೆಸುತ್ತಾರೆ. ಹೆತ್ತವರು ತೀರಿದ ಬಳಿಕ ಬೇರೆ ವಯಸ್ಸಾದ ಜನರಲ್ಲಿ ನಮ್ಮ ತಂದೆ ತಾಯಂದಿರನ್ನು ಕಾಣವುದೇ ಪುಣ್ಮಸ್ಮರಣೆ ಎಂದು ಪ್ರವಚನಕಾರ ಈಶ್ವರ ಮಂಟೂರ ತಿಳಿಸಿದರು.
ತಾಲೂಕಿನ ಉಕ್ಕಿನಾಳ ಗ್ರಾಮದಲ್ಲಿ ದಿ.ಬಸನಗೌಡ ಮಾಲಿ ಪಾಟೀಲ್ ಉಕ್ಕಿನಾಳ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹೆತ್ತವರ ಋಉಣ ಎಂದಿಗೂ ತೀರಸಿಲು ಅಸಾಧ್ಯವಾದ ಮಾತು. ಸೇವೆಗೊಂದು ಅವಕಾಶ ಸಿಕ್ಕಲ್ಲಿ ಅದನ್ನು ಉತ್ತಮ ಕಾರ್ಯದ ಮೂಲಕ ಸಲ್ಲಿಸಬೇಕು. ಅದಕ್ಕೆ ಸಾಕ್ಷಿ ಎಂಬಂತೆ. ಡಾ.ಮಲ್ಲನಗೌಡ ಪಾಟೀಲ್ ಮತ್ತು ಡಾ.ಶೇಖರ ಪಾಟೀಲ್ ಅವರ ತಮ್ಮ ಹೆತ್ತವರ ಸ್ಮರಣಾರ್ಥವಾಗಿ ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ರೋಗಿಗಳಿಗೆ ಆರೋಗ್ಯ ಭಾಗ್ಯ ಕಲ್ಪಿಸುವ ಮೂಲಕ ತಮ್ಮ ವೈದ್ಯಕೀಯ ವೃತ್ತಿಯನ್ನು ಸಾರ್ಥಕಥೆ ಪಡೆದುಕೊಳ್ಳಲು ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಮತ್ತೊಬ್ಬರಿಗೆ ಆರೋಗ್ಯ ಸುಧಾರಿಸುವ ಕಾರ್ಯಕ್ರಮವನ್ನು ಮಾಡುತ್ತಿರುವದು ಶ್ಲಾಘನೀಯ. ಸಾವಿರಾರು ಜನರಿಗೆ ಆರೋಗ್ಯ ತಪಾಸಣೆ ನಡೆಸುವ ಮೂಲಕ ಅದಕ್ಕೆ ಬೇಕಾದ ಚಿಕಿತ್ಸೆ ನೀಡಿ ಗುಣಮುಖ ಮಾಡುವಲ್ಲಿ ತಮ್ಮ ತಂದೆಯವರನ್ನು ಮತ್ತೊಬ್ಬರ ಆರೋಗ್ಯ ಭಾಗ್ಯ ಕಲ್ಪಿಸುವ ಮೂಲಕ ತಮ್ಮ ತಂದೆ ದಿ.ಬಸನಗೌಡ ಮಾಲಿ ಪಾಟೀಲ್ರ ಜೀವಂತಿಕೆಯನ್ನು ಪಡೆದುಕೊಂಡಿದ್ದಾರೆ. ಮತ್ತೊಬ್ಬರಲ್ಲಿ ಅವರ ತಂದೆಯವರನ್ನು ಕಾಣುತ್ತಿದ್ದಾರೆ.
ಆರೋಗ್ಯ ವೆಂದರೆ ಆರು ಯೋಗ್ಯವೇ.? ಕಾಮ, ಕ್ರೋಧ ಮದ ಮತ್ಸರ ವೆಂಬ ಆರು ಷಡ್ವರ್ಗಗಳು ಸರಿಯೇ ಇವೇಯೇ ಎಂದಂತೆ ಎಂದು ಸೂಕ್ಷ್ಮವಾಗಿ ತಿಳಿಸಿದರು. ಕೃಷಿ ಮೇಳದಂತೆ ಆರೋಗ್ಯ ಮೇಳ ನಡೆದಿದೆ. ಸೊನ್ನದ ಸುಕ್ಷೇತ್ರದ ಜಾತ್ರೆಗೆ ಸೇರಿದಂತೆ ಜನರು ಇಲ್ಲಿ ಸೇರಿದ್ದಾರೆ ಎಂದರು.
ಶಿಬಿರದಲ್ಲಿ ಅಂದಾಜು 2000 ಕ್ಕೂ ಹೆಚ್ಚು ಜನರು ಶೂಗರ್, ಬಿಪಿ, ಕಣ್ಣು ಸೇರಿದಂತೆ ಸ್ತ್ರೀ ರೋಗ ಮತ್ತು ಕ್ಯಾನ್ಸರ್ ರೋಗ ತಪಾಸಣೆ ಮಾಡಿಕೊಂಡರು. ತಪಾಸಣೆಗಾಗಿ ಆಯಾ ನುರಿತ ವೈದ್ಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಗಮಿಸಿದ ಸಾರ್ವಜನಿಕರೆಲ್ಲರಿಗೂ ಊಟದ ವ್ಯವಸ್ಥೆಯು ಕಲ್ಪಿಸಲಾಗಿತ್ತು. ಮಾಝಿ ಶಾಸಕ ಗುರು ಪಾಟೀಲ್ ಶಿರವಾಳ, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಅಮೀನರಡ್ಡಿ ಯಾಳಗಿ, ಡಾ.ಚಂದ್ರಶೇಖರ ಸುಬೇದಾರ, ಡಾ.ಸುದತ್ ದರ್ಶನಾಪುರ, ಡಾ.ಮಲ್ಲನಗೌಡ ಪಾಟೀಲ್ ಉಕ್ಕಿನಾಳ, ಡಾ.ಶೇಖರ ಪಾಟೀಲ್, ರಾಜೂಗೌಡ ಉಕ್ಕಿನಾಳ ಸೇರಿದಂತೆ ಹಲವಾರು ತಜ್ಞ ವೈದ್ಯರು ಉಪಸ್ಥಿತರಿದ್ದರು.
ರೋಗಾಣುಗಳನ್ನು ಸದೆಬಡೆಯುವ ವೈದ್ಯನೂ ಯೋಧನೇ..!
ಕ್ಯಾನ್ಸರ್ ಅನ್ನುವುದು ಶೇ.20 ರಷ್ಟು ಚಿಕಿತ್ಸೆ 80 ರಷ್ಟು ಪ್ರೀತಿಯ ಮಾತುಗಳಿಂದ ಜನರ ಮಾನಸದಲ್ಲಿರುವ ರೋಗಗಳನ್ನು ಹೊಡೆದೋಡಿಸತಕ್ಕಂತ ಒಬ್ಬ ಯೋಧ ವೈದ್ಯ ಯೋಧ. ಗಡಿಯಲ್ಲಿ ಓರ್ವ ಯೋಧ ಹೇಗೆ ವೈರಿಗಳನ್ನು ಸದೆ ಬಡಿಯುತ್ತಾರೋ ಅದೇ ರೀತಿ ಕ್ಯಾನ್ಸರ್ ರೋಗವನ್ನು ಗುಣಪಡಿಸಲು ಸಾಕಷ್ಟು ಹೋರಟ ನಡೆಸುತ್ತಾರೆ ಹೀಗಾಗಿ ನಮ್ಮ ತಜ್ಞ ವೈದ್ಯ ಡಾ.ಶೇಖರ ಪಾಟೀಲ್ ಸಹ ಒಬ್ಬ ವೈದ್ಯ ಯೋಧರಿದ್ದಂತೆ ಎಂದು ಪ್ರವಚನಕಾರ ಈಶ್ವರ ಮಂಟೂರ ಅಭಿಪ್ರಾಯಪಟ್ಟರು.
ಹೆತ್ತವರ ಸ್ಮರಣಾರ್ಥವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣ ಶಿಬಿರವನ್ನು ಆರೋಗ್ಯ ಜಾತ್ರೆ ಎನ್ನಬಹುದು. ಶಿಬಿರದ ಸದುಪಯೋಗ ಪಡೆಯುವಲ್ಲಿ ಸಾವಿರಾರು ಜನರು ಭಾಗವಹಿಸಿದ್ದು, ಬಡವರಿಗೆ ಈ ಶಿಬಿರ ಅನುಕೂಲವಾಗಿದೆ. ಗ್ರಾಮೀಣ ಭಾಗದ ಜನರಿಗೆ ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಆಯೋಜಿಸುವ ಶಕ್ತಿ ಮಾಲಿ ಪಾಟೀಲ್ ಕುಟುಂಬಕ್ಕೆ ದೊರೆಯಲ್ಲಿ ಎಂದರು.