ಪ್ರಮುಖ ಸುದ್ದಿ

ಬಸವ ಅಭಿಮಾನಿಗಳಿಂದ ರಕ್ತದಾನ ಶಿಬಿರ ಆರಂಭ

ಬಸವ ಜಯಂತಿ ಪ್ರಯುಕ್ತ ರಕ್ತದಾನ‌ ಶಿಬಿರಕ್ಕೆ ಚಾಲನೆ

ಬಸವ ಅಭಿಮಾನಿಗಳಿಂದ ರಕ್ತದಾನ ಶಿಬಿರ ಆರಂಭ

ಬಸವ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಚಾಲನೆ

ಶಹಾಪುರಃ ಜಗಜ್ಯೋತಿ ಬಸವೇಶ್ವರರ ಜಯಂತ್ಯತ್ಸವ ಅಂಗವಾಗಿ ನಗರದ ಗಾಂಧಿ ಚೌಕ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬಸವ ಯುವ ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ ಮತ್ತು ಅಂಗಾಂಗ ದಾನ ಮಾಡುವ ಆಸಕ್ತರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

10 ಗಂಟೆಯಿಂದ ರಕ್ತದಾನ ಶಿಬಿರ ಆಭವಾಗಿದ್ದು, ಈಗಾಗಲೇ ಯುವಕರು ರಕ್ತದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ರಕ್ತವನ್ನು ಕೊಡುತ್ತಿದ್ದಾರೆ. ಈ ಕಾರ್ಯಕ್ರಮವನ್ನಿ ವೀರಶೈವ ಲಿಂಗಾಯತ ಸಮಾಜದ ಯುವ ಘಟಕ ಆಯೋಜಕತ್ವದಲ್ಲಿ ನಡೆಯುತ್ತಿದ್ದು,‌ ಎಲ್ಲರೂ ಭಾಗವಹಿಸುತ್ತಿದ್ದಾರೆ.

ಬಸವ ಜಯಂತಿಗೆ ಇಂತಹ ಉತ್ತಮ‌ ಕಾರ್ಯ ಕಳೆದ ಹಲವಾರು ವರ್ಷಗಳಿಂದ ಆಯೋಜಿಸಲಾಗುತ್ತಿದ್ದು, ಸಾಕಷ್ಡು ಜನರಿಗೆ ಇದರಿಂದ ಸಹಾಯವಾಗಿದೆ ಎನ್ನುತ್ತಾರೆ ಯುವ ಮುಖಂಡ ಅರವಿಂದ ಉಪ್ಪಿನ್.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಮಹಾದೆವ ಚಟ್ರಿಕಿ, ರವಿ ಮೋಟಗಿ, ಮಲ್ಲಿಕಾರ್ಜುನ ಬುಕಿಸ್ಟಗಾರ, ಶಂಭು ಗೋಗಿ, ರಾಜೂ ಮಡ್ನಾಳ, ಸಿದ್ದು ಭಗತ್ ಸಿಂಗ್ ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button