ಪ್ರಮುಖ ಸುದ್ದಿಬಸವಭಕ್ತಿ

ಬಸವ ಜಯಂತ್ಯುತ್ಸವಃ ಪ್ರತಿಮೆಗೆ ಪೂಜೆ ಮಾಲಾರ್ಪಣೆ

ಶಹಾಪುರಃ ರವಿವಾರ ಬಸವ ಜಯಂತಿ ಅಂಗವಾಗಿ ಇಲ್ಲಿನ ವೀರಶೈವ ಲಿಂಗಾಯತ ಮಹಾಸಭಾವತಿಯಿಂದ ಬಸವೇಶ್ವರರ ಪ್ರತಿಮೆಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಚಂದ್ರಶೇಖರ ಆರಬೋಳ, ಕೊರೊನಾ ಮಹಾಮಾರಿ ಎಲ್ಲಡೆ ತೀವ್ರಗತಿಯಲ್ಲಿ ಹಬ್ಬುತ್ತಿದ್ದು, ಕೊರೊನಾ ತಡೆಗೆ ಇಡಿ ದೇಶ ಲಾಕ್ ಡೌನ್ ನಿಯಮದಲ್ಲಿದೆ. ಹೀಗಾಗಿ ಈ ಬಾರಿ ಬಸವ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಕೊರೊನಾ ವೈರಸ್ ದೇಶ ಬಿಟ್ಟು ತೊಲಗಲಿ, ನಾವೆಲ್ಲ ಕೊರೊನಾ ವಿರುದ್ಧ ಹೋರಾಟ ನಡೆಸಬೇಕಿದೆ. ಲಾಕ್ ಡೌನ್ ನಿಯಮಗಳನ್ನು ಯಾರೊಬ್ಬರು ಮೀರಬಾರದು.

ವೈದ್ಯರು, ಪೊಲೀಸರು ಮತ್ತು ಪೌರ ಕಾರ್ಮಿಕರ ಸೇವೆ ಅನನ್ಯ. ಅಲ್ಲರೂ ನಿಯಮಗಳನ್ನು ಪಾಲಿಸಬೇಕು. ಸಆಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇಡಿ ವಿಶ್ವಕ್ಕೆ ಈ ಕೊರೊನಾ ಹೆಮ್ಮಾರಿ ಆವರಿಸಿದ್ದು, ಇದರಿಂದ ಎಲ್ಲರೂ ಬಚಾವ್ ಆಗಬೇಕಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲನೆ ಮಾಡಬೇಕು. ಆ ಕಾರಣಕ್ಕೆ ಬಸವ ಅನುಯಾಯಿಗಳು ಎಲ್ಲರೂ ಸರಳವಾಗಿ ಮನೆಯಲ್ಲಿಯೇ ಬಸವ ಜಯಂತಿ ಆಚರಣೆ ಮಾಡುತ್ತಿದ್ದಾರೆ.

ಮುಸ್ಲಿಂ ಬಾಂಧವರು ಪವಿತ್ರ ಹಬ್ಬ ರಂಜಾನ್ ಸಹ ಅವರು ಮನೆಯಲ್ಲಿಯೇ ಆಚರಣೆ ಮಾಡಬೇಕಿದೆ. ಇಂತಹ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕೊರೊನಾ ವೈರಸ್ ದೇಶದಿಂದ ನಾಶವಾಗಿ ಹೋಗಲಿ. ಎಲ್ಲರೂ ಬಾಳು ಮತ್ತೆ ಮೊದಲಿನಂತೆ ಸುಗಮವಾಗಿ ಸಆಗುವಂತೆ ಆಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ ಜಗನ್ನಾಥರಡ್ಡಿ, ಪೌರಾಯುಕ್ತ ಬಸವರಾಜ ಶಿವಪೂಜೆ ಮತ್ತು ಸಿಪಿಐ ಹನುಮರಡ್ಡೆಪ್ಪನವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಸವರಾಜೇಂದ್ರ ದೇಶಮುಖ, ಸುರೇಂದ್ರ ಪಾಟೀಲ್ ಮಡ್ನಾಳ, ಡಾ.ಚಂದ್ರಶೇಖರ ಸುಬೇದಾರ, ಬಸವರಾಜ ವಿಭೂತಿಹಳ್ಳಿ, ಬಸವರಾಜ ಆನೇಗುಂದಿ, ಸಿದ್ದು ಆರಬೋಳ, ಗುಂಡಪ್ಪ ತುಂಬಿಗಿ, ಶರಣು ಗದ್ದುಗೆ, ಸುಧೀರ ಚಿಂಚೋಳಿ, ಮಹಾದೇವ ಚಟ್ರಿಕಿ, ರುದ್ರಣ್ಣ ಚಟ್ರಿಕಿ, ಸಂತೋಷ ಭಾಸುತ್ಕರ, ಚಂದ್ರು ಯಾಳಗಿ ಸೇರಿದಂತೆ ಯುವ ಮುಖಂಡರಾದ ಅರವಿಂದ ಉಪ್ಪಿನ್, ಶಂಭುಲಿಂಗ ಗೋಗಿ, ಮಲ್ಲಿಕಾರ್ಜುನ ಬುಕಿಸ್ಟಗಾರ, ರವಿ ಮೋಟಗಿ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button