Home
ನಾಳೆಯಿಂದ ಪಿಯು, ಪದವಿ ಕಾಲೇಜು ಪುನಾರಂಭ – ಸಚಿವ ಬಿ.ಸಿ.ನಾಗೇಶ್
ನಾಳೆಯಿಂದ ಪಿಯು, ಪದವಿ ಕಾಲೇಜು ಪುನಾರಂಭ – ಸಚಿವ ಬಿ.ಸಿ.ನಾಗೇಶ್
ಹೈಕೋರ್ಟ್ ಸೂಚನೆಯಂತೆ ಕಾಲೇಜು ಆರಂಭ
ಬೆಂಗಳೂರಃ ನಾಳೆಯಿಂದ ಪಿಯುಸಿ, ಪದವಿ ಕಾಲೇಜು ಪುನಾರಂಭ ಮಾಡಲಾಗುತ್ತಿದೆ. ಎಲ್ಲರೂ ಸಮವಸ್ತ್ರ ಸಂಹಿತೆ ಪ್ರಕಾರ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಯಾವುದೇ ಧಾರ್ಮಿಕ ವಸ್ತ್ರಗಳು ಧರಿಸುವಂತಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಕೋರ್ಟ್ ಸೂಚನೆಯಂತೆ ಶಾಲಾ ಕಾಲೇಜು ಆರಂಭಿಸಲಾಗುತ್ತಿದೆ. ಸಮವಸ್ತ್ರ ಸಂಹಿತೆ ಪಾಲನೆ ಮಾಡಬೇಕು.
ಕೋರ್ಟ ಆದೇಶದಂತೆ ಎಲ್ಲರೂ ನಡೆದುಕೊಳ್ಳಬೇಕು. ಇಂದು ಹಿಜಾಬ್ ವಿವಾದ ಕುರಿತು ಮದ್ಯಾಹ್ನ ವಿಚಾರಣೆ ಮುಂದುವರೆಯಲಿದೆ. ಎಲ್ಲರೂ ಹೈಕೋರ್ಟ್ ಸೂಚನೆಯಂತೆ ನಡೆದುಕೊಳ್ಳಬೇಕು. ಸಮವಸ್ತ್ರ ಇಲ್ಲದ ಕಡೆ ಸಮವಸ್ತ್ರ ವ್ಯವಸ್ಥೆ ಮಾಡಲಾಗುವದು ಎಂದು ತಿಳಿಸಿದರು.