Home

ವನದುರ್ಗದಲ್ಲಿ ಬೆಳಕು ಯೋಜನೆಗೆ ದರ್ಶನಾಪುರ ಚಾಲನೆ

ವನದುರ್ಗದಲ್ಲಿ ಬೆಳಕು ಯೋಜನೆಗೆ ದರ್ಶನಾಪುರ ಚಾಲನೆ

yadgiri, ಶಹಾಪುರ: ನಿರಂತರವಾಗಿ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿರುವ ವನದುರ್ಗ ಗ್ರಾಮಕ್ಕೆ ಬೆಳಕು ಯೋಜನೆ ಅಡಿಯಲ್ಲಿ ವಿದ್ಯುತ್ ಸಮಸ್ಯೆಯ ಮುಕ್ತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ವಿದ್ಯುತ್ ನಿಗಮದ ಆಶ್ರಯದಲ್ಲಿ ಭಾನುವಾರ ಆಯೋಜಿಸದ್ದ ಬೆಳಕು ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ತಾಲ್ಲೂಕಿನ ಸಗರ ಗ್ರಾಮದಿಂದ 11 ಕೆ.ವಿ.ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಬೆಳಕು ಯೋಜನೆ ಅಡಿಯಲ್ಲಿ 670 ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ರೈತರ ಅನುಕೂಲಕ್ಕಾಗಿ ನಿರಂತರವಾಗಿ ಏಳು ಗಂಟೆ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿಯೊಬ್ಬರು ವಿದ್ಯುತ್‍ನ್ನು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸಬೇಕೆಂದು ಸಲಹೆ ನೀಡಿದರು.

ಸೋಲಾರ ಹಾಗೂ ಗಾಳಿ ಬಳಕೆಯಿಂದ ತುಸು ವಿದ್ಯುತ್ ಸಮಸ್ಯೆಯ ಒತ್ತಡ ತಗ್ಗಿದೆ. ಶಹಾಪುರ ಕ್ಷೇತ್ರದ ಪ್ರತಿ ಹಳ್ಳಿಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ನನ್ನದಾಗಿದೆ. ಗುಂಪು ಗುಂಪಾಗಿ ಇರುವ ಮನೆಗಳಿಗೆ ತುರ್ತಾಗಿ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿರುವೆ. ಅಭಿವೃದ್ಧಿ ಕಾಮಗಾರಿಗಳಿಗೆ ಮೊದಲ ಆದ್ಯತೆಯಾಗಿದೆ. ಬರುವ ದಿನಗಳಲ್ಲಿ ವನದುರ್ಗ ಗ್ರಾಮದಲ್ಲಿಯೇ 110 ಕೆ.ವಿ. ವಿದ್ಯುತ್ ಕೇಂದ್ರ ಸ್ಥಾಪಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುವೆ. ಇದರಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಸಮಸ್ಯೆ ದೂರವಾಗಲಿದೆ ಎಂದರು.

ವಿದ್ಯುತ್ ನಿಗಮದ ಹಿರಿಯ ಅಧಿಕಾರಿ ರಾಘವೇಂದ್ರ, ಎಂಜಿನಿಯರ್ ಶಾಂತಪ್ಪ ಪೂಜಾರಿ, ತಾಪಂ ಮಾಜಿ ಅಧ್ಯಕ್ಷ ಹಣಮಂತರಾಯ ದೊರೆ ದಳಪತಿ, ಗ್ರಾಪಂ ಅಧ್ಯಕ್ಷ ಮರೆಪ್ಪ, ಉಪಾಧ್ಯಕ್ಷೆ ಖತಿಜಾಬೇಗಂ ಹಾಗೂ ಗ್ರಾಮ ಮುಖಂಡರಾದ ಚನ್ನಬಸವರಡ್ಡಿ ಚನ್ನೂರ, ಗೌಡಪ್ಪಗೌಡ ಆಲ್ದಾಳ, ಕಾಶಿರಾಜ ದೂದೆಕೊಂಡೆ, ಲಕ್ಷ್ಮಣ ವೆಂಕಟಗಿರಿ, ಭೀಮರಾಯ ಹುಣಸಿಗಿಡ, ಖಾಜಾ ಪಟೇಲ್ ಬುದನೂರ, ಭೀಮಣ್ಣ ಬುದನೂರ, ರಂಗನಾಥ ದೊರೆ, ಮಲ್ಲಿಕಾರ್ಜುನ ಪಡದಳ್ಳಿ, ಶಿವಣ್ಣ ಲಿಕ್ಕಿ, ಹಣಮಂತರಾಯ ಟೊಕಾಪುರ ಇದ್ದರು.

 

Related Articles

Leave a Reply

Your email address will not be published. Required fields are marked *

Back to top button