ಶಹಾಪುರ ಸಂಕ್ರಾಂತಿ – ಜ. 15 ರಂದು ಬೆಳಗ್ಗೆ ಪಲ್ಲಕ್ಕಿ ಪುರ ಪ್ರವೇಶ
ಭೀ.ಗುಡಿ ಬಲಭೀಮೇಶ್ವರ - ದಿಗ್ಗಿ ಸಂಗಮೇಶ್ವರರ ಪಲ್ಲಕ್ಕಿ ಉತ್ಸವ
ಶಹಾಪುರ – ಸಂಕ್ರಾಂತಿಃ ಜ. 15 ರಂದು ಜೋಡು ಪಲ್ಲಕ್ಕಿ ಉತ್ಸವ
ಭೀ.ಗುಡಿ ಬಲಭೀಮೇಶ್ವರ – ದಿಗ್ಗಿ ಸಂಗಮೇಶ್ವರರ ಪಲ್ಲಕ್ಕಿ ಉತ್ಸವ
ಶಹಾಪುರಃ ಪ್ರತಿ ಸಂಕ್ರಾಂತಿ ಹಬ್ಬದಂಗವಾಗಿ ಸಗರನಾಡಿನ ಆರಾಧ್ಯದೇವರಾದ ಭೀಮರಾಯನ ಗುಡಿಯ ಬಲಭೀಮೇಶ್ವರ ಹಾಗೂ ದಿಗ್ಗಿಯ ಸಂಗಮೇಶ್ವರರ ಉತ್ವವ ಮೂರ್ತಿ ಹೊತ್ತ ಎರಡು ಪಲ್ಲಕ್ಕಿಯು ಜನೇವರಿ 15 ರಂದು ಬೆಳಗ್ಗೆ 5-30 ಕ್ಕೆ ದಿಗ್ಗಿ ಅಗಸಿ ಮೂಲಕ ಪಲ್ಲಕ್ಕಿಗಳು ಪುರ ಪ್ರವೇಶ ಮಾಡಲಿವೆ.
ನಗರದ ದಿಗ್ಗಿ ಅಗಸಿ, ಗಾಂಧಿ ಚೌಕ ಮಾರ್ಗವಾಗಿ ಮೋಚಿಗಡ್ಡಾ, ಬಸವೇಶ್ವರ ವೃತ್ತದ ಮೂಲಕ ಹಳಿಸಗರ ಮಾರ್ಗವಾಗಿ ಹುರಸಗುಂಡಗಿ ಗ್ರಾಮ ಸಮೀಪದ ಭೀಮಾ ನಂದಿಯಲಿ ಸಾಂಪ್ರದಾಯಿಕ ಗಂಗಾ ಸ್ನಾನ ನಡೆಯಲಿದೆ ಎಂದು ತಾಲೂಕಾಡಳಿತ ತಿಳಿಸಿದೆ.
ಅಲ್ಲದೆ ಅಂದೇ ರಾತ್ರಿ ಮತ್ತೆ ವಾಪಸ್ ನಗರ ಪ್ರವೇಶಿಸಿ ಸ್ಥಳೀಯ ಮಾರುತಿ ಮಂದಿರ ಕಟ್ಟೆಯಲ್ಲಿ ವಿಶ್ರಾಂತಿ ಪಡೆದು ಎಂದಿನ ಪದ್ಧತಿಯಂತೆ ಅಲ್ಲಿ ಭಕ್ತಾಧಿಗಳಿಂದ ಪೂಜೆ ಪುನಸ್ಕಾರ ನಡೆದು, ಸಾವಿರಾರು ಭಕ್ತರಿಗೆ ದರ್ಶನ ನೀಡಿ ಅಲ್ಲಿಂದ ಪಾರಂಪರಿಕ ದಿವಟಿಗೆಗಳ ಸಾಲು, ವಿದ್ಯುತ್ ದೀಪಗಳ ಸಾಲಿನೊಂದಿಗೆ ಹಲಗೆ ಸೇರಿದಂತೆ ವಿವಿಧ ವಾದ್ಯಗಳ ನಿನಾದನೊಂದಿಗೆ ಭಕ್ತರ ಭಜನೆ ಹರ್ಷದ್ಗೋರ, ಜೈಕಾರದೊಂದಿಗೆ ಮೆರವಣಿಗೆ ಹೊರಟು ಬೆಳಗಿನ ಜಾವ ಅಂದರೆ ಜ. 16 ರ ಬೆಳಗ್ಗೆ ದಿಗ್ಗಿ ಅಗಸಿ ಮೂಲಕ ಎರಡು ಪಲ್ಲಕ್ಕಿಗಳು ತಮ್ಮ ಮೂಲ ಸ್ಥಾನ ಆಯಾ ಮಂದಿರಗಳಿಗೆ ತೆರಳಲಿವೆ.
ಹೀಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರುಗಳ ದರ್ಶನ ಪಡೆದು ಪುನೀತರಾಗಬೇಕು. ಅಲ್ಲದೆ ಕಳೆದ ಬಾರಿ ಕೋವಿಡ್ ಹಿನ್ನೆಲೆ ಜೋಡು ಪಲ್ಲಕ್ಕಿ ಮೆರವಣಿಗೆಗೆ, ಜಾತ್ರೆ ನಡೆಯಲಿಲ್ಲ. ಹೀಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು, ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಎಂದಿನಂತೆ ಭಕ್ತರ ಸೇವೆಗೆ ತಾಲೂಕಾಡಳಿತ ಮತ್ತು ಆಯಾ ಮಂದಿರದ ಸೇವಾ ಮಂಡಳಿ ಸಮರ್ಪಕ ವ್ಯವಸ್ಥೆ ಮಾಡಿರುತ್ತದೆ ಎಂದು ತಹಶಿಲ್ದಾರರು ಹಾಗೂ ಭಕ್ತ ಮಂಡಳಿ ತಿಳಿಸಿದೆ.