ಶಹಾಪುರಃ ಬಲಿಪಾಡ್ಯಮಿ – ದತ್ತಿ ದೇವಾಸ್ಥಾನಗಳಲ್ಲಿ ಗೋಪೂಜೆ
ಧಾರ್ಮಿಕ ದತ್ತಿ ಇಲಾಖೆ ಸೂಚನೆಃ ದೇವಾಲಯಗಳಲ್ಲಿ ಗೋಪೂಜೆ
ಶಹಾಪುರಃ ಬಲಿಪಾಡ್ಯಮಿ ನಿಮಿತ್ತ ದತ್ತಿ ದೇವಾಸ್ಥಾನಗಳಲ್ಲಿ ಗೋಪೂಜೆ
ಧಾರ್ಮಿಕ ದತ್ತಿ ಇಲಾಖೆ ಸೂಚನೆಃ ದೇವಾಲಯಗಳಲ್ಲಿ ಗೋಪೂಜೆ
ಯಾದಗಿರಿ, ಶಹಾಪುರಃ ಬುಧವಾರ ಬಲಿಪಾಡ್ಯಮಿ ದಿನ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿ ಬರುವ ದೇವಾಲಯಗಳಲ್ಲಿ ಸಂಜೆ ಗೋಧೂಳಿ ಸಮಯದಲ್ಲಿ ಕಡ್ಡಾಯವಾಗಿ ಶಾಸ್ತ್ರೋಕ್ತವಾಗಿ ಗೋಪೂಜೆ ನಡೆಸಲು ಸರ್ಕಾರ ಆದೇಶ ಹೊರಡಿಸಿತ್ತು.
ಅದರಂತೆ ಇಂದು ಸಂಜೆ ಗೋಧೂಳಿ ಸಮಯದಲ್ಲಿ ಇಲ್ಲಿನ ಭೀಮರಾಯನ ಗುಡಿ ಬಲಭೀಮೇಶ್ವರ ದೇವಸ್ಥಾನ ಹಾಗೂ ದಿಗ್ಗಿಯ ಸಂಗಮೇಶ್ವರ ದೇವಸ್ಥಾನದಲ್ಲಿ ಗೋಪೂಜೆ ಕಾರ್ಯಕ್ರಮವನ್ನು ಧಾರ್ಮಿಕ ವಿಧಿವಿಧಾನದಂತೆ ನೆರವೇರಿಸಲಾಯಿತು.
ಗೋಮಾತೆಯನ್ನು ಸ್ನಾನ ಮಾಡಿಸಿ, ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ ಗೋವಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು ತಿನ್ನಿಸುವ ಮೂಲಕ ದೀಪ ಧೂಪದಿಂದ ಬೆಳಗಿ ಕಾಯಿ ಒಡೆದು ಭಕ್ತಿಪೂರ್ವಕ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭೀ.ಗುಡಿ ಗೋಪೂಜೆ ಸಂದರ್ಭ ಕಂದಾಯ ನಿರೀಕ್ಷಕ ಭೀಮರಡ್ಡಿ, ಮುಖಂಡರಾದ ಸಣ್ಣನಿಂಗಣ್ಣ ನಾಯ್ಕೋಡಿ ಮತ್ತು ಗುಡಿಯ ಅರ್ಚಕರು ಇದ್ದರು.
ದಿಗ್ಗಿ ಸಂಗಮೇಶ್ವರ ದೇವಸ್ಥಾನದಲ್ಲಿ ನಡೆದ ಗೋಪೂಜೆ ವೇಳೆ ದೇವಸ್ಥಾನದ ಹಿರಿಯ ಅರ್ಚಕರಾದ ದೇವಯ್ಯ ಸ್ವಾಮಿ, ಕಂದಾಯ ನಿರೀಕ್ಷಕರು ಭಕ್ತಾಧಿಗಳು ಇದ್ದರು.
ಎಲ್ಲಿ ಗೋವುಗಳು ಇರುತ್ತವೆ. ಅವುಗಳಿಗೆ ಪೂಜಾವಿಧಿ ನೆರವೇರುತ್ತಿರುತ್ತದೆ. ಆ ಪ್ರದೇಶ ಯಾವಾಗಲೂ ಸಮೃದ್ಧವಾಗಿರುತ್ತದೆ ಎಂಬ ನಂಬಿಕೆ ಪುರಾತನ ಪುರಾಣಗಳಿಂದಲೂ ತಿಳಿದು ಬರುತ್ತದೆ. ಹೀಗಾಗಿ ರಾಜ್ಯಾದ್ಯಂತ ದೇವಾಲಯಗಳಲ್ಲಿ ಅದು ಗೋಧೂಳಿ ಸಮಯದಲ್ಲಿ ಶಾಸ್ತ್ರೋಕ್ತವಾಗಿ ಗೋಪೂಜೆ ಮಾಡುವದರಿಂದ ರಾಜ್ಯಕ್ಕೆ ಮಳೆ, ಬೆಳೆ ಕಾಲಕಾಲಕ್ಕೆ ಉತ್ತಮವಾಗಿ ಆಗಲಿದೆ.
-ದೇವಯ್ಯ ಸ್ವಾಮೀ. ಅರ್ಚಕರು.ದಿಗ್ಗಿ.