ರೈತ ಕುಟುಂಬಕ್ಕೊಂದು ಕೃಷಿ ಪದವಿಧರರ ಅಗತ್ಯಃ ಗದ್ದುಗೆ
ಕೃಷಿ ಖಾಸಗೀಕರಣಃ ವಿದ್ಯಾರ್ಥಿಗಳ ಧರಣಿಗೆ ಕರವೇ ಬೆಂಬಲ
ಯಾದಗಿರಿಃ ಕೃಷಿ ವಿಶ್ವವಿದ್ಯಾಲಯ ಕಾಯ್ದೆ ತಿದ್ದುಪಡೆ ಸೇರಿದಂತೆ ಕೃಷಿ ಕಾಲೇಜುಗಳನ್ನು ಖಾಸಗೀಕರಣಗೊಳಿಸುತ್ತಿರುವದನ್ನು ವಿರೋಧಿಸಿ ಜಿಲ್ಲೆಯ ಶಹಾಪುರ ಸಮೀಪದ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದ ಎದುರು ಧರಣಿ ನಿರಂತ ಧರಣೆ ಕೈಗೊಂಡ ಕೃಷಿ ವಿದ್ಯಾರ್ಥಿಗಳ ಧರಣಿಗೆ ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ ಬೆಂಬಲಿಸಿ ಗುರುವಾರ ಧರಣಿಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶರಣು ಬಿ.ಗದ್ದುಗೆ, ನೂತನವಾಗಿ ಖಾಸಗಿ ಕೃಷಿ ಕಾಲೇಜು ಆರಂಭಕ್ಕೆ ಮನ್ನಣೆ ನೀಡಿರುವದನ್ನು ಕರವೇ ಖಂಡಿಸುತ್ತದೆ. ಖಾಸಗಿ ಕೃಷಿ ಕಾಲೇಜುಗಳಿಗೆ ಮಾನ್ಯತೆ ನೀಡಿರುವದನ್ನು ಸರ್ಕಾರ ರದ್ದುಗೊಳಿಸಬೇಕು. ಸರ್ಕಾರಿ ಕೃಷಿ ಕಾಲೇಜುಗಳಿಗೆ ಉತ್ತೇಜನ ನೀಡಬೇಕು. ನಾಡಿನ ಪ್ರತಿ ರೈತ ಕುಟುಂಬಕ್ಕೊಬ್ಬ ಕೃಷಿ ಪದವಿಧರ ಹೊಂದಿದಾಗ ರೈತ ಆರ್ಥಿಕವಾಗಿ ಸಪಳವಾಗಲು ಸಾಧ್ಯವಿದೆ. ಅಲ್ಲದೆ ದೇಶದ ಕೃಷಿ ಬೆಳೆಯಲು ಸಹಕಾರ ಆಗಲಿದೆ.
ಆದರೆ ಸರ್ಕಾರ ಕೃಷಿ ಬೆಳವಣಿಗೆ ಮಾಡುತ್ತೇವೆ ಎಂದು ಖಾಸಗೀಕರಣವಹಿಸಿದ್ದಲ್ಲಿ ಗುಣಮಟ್ಟದ ಕೃಷಿ ಶಿಕ್ಷಣ ಒದಗಿಸದೆ, ಹಣದ ಮೇಲೆ ಸರ್ಟಿಫಿಕೇಟ್‍ಆಗಿ ಕೃಷಿ ಕಾಲೇಜು ಅನ್ನುವಂತಾಗುತ್ತದೆ. ಗುಣಮಟ್ಟ ಕಡಿಮೆಯಾಗಲಿದೆ. ಕಾರಣ ಸರ್ಕಾರ ಕೂಡಲೇ ಕೃಷಿ ಕಾಲೇಜುಗಳನ್ನು ಖಾಸಗೀಕರಣಗೊಳಿಸಬಾರದು ಎಂದು ಆಗ್ರಹಿಸಿದರು.
ಅಲ್ಲದೆ ಕೃಷಿ ಪದವಿ ವಿದ್ಯಾರ್ಥಿಗಳು ನಡೆಸುತ್ತಿರುವ ನಿರಂತರ ಧರಣಿಗೆ ನಮ್ಮ ಬೆಂಬಲ ಯಾವತ್ತು ಇರುತ್ತದೆ. ಅವರ ಬೇಡಿಕೆ ಈಡೇರಿಕೆವರೆಗೂ ಕರವೇ ಸಾಥ್ ನೀಡಲಿದೆ. ಸರ್ಕಾರ ಕೂಡಲೇ ವಿದ್ಯಾರ್ಥಿ ಜೀವನದಲ್ಲಿ ಆಟವಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಆರೋಗ್ಯಯುತ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ಣಿಡಬೇಕು. ಗೊಂದಲಗಳಿಗೆ ತೆರೆ ಎಳೆಯಬೇಕು. ಅಲ್ಲದೆ ವಿದ್ಯಾರ್ಥೀಗಳು ತಿಳಿಸಿದಂತೆ ರೈ ಟೆಕ್ನಾಲಜಿಯಿಂದ ಕೃಷಿ ವಿವಿಚಟುವಟಿಕೆ ಹಾಳಾಗುತ್ತದೆ ಇದರಿಂದ ಸರ್ಕಾರಿ ಕೃಷಿ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಬೀರುವ ಪರಿಣಾಮ, ಅದರಿಂದ ಉಂಟಾಗುವ ಶೈಕ್ಷಣಿಕ ಸ್ಥಿತಿ ಕುರಿತು ಸರ್ಕಾರ ಚಿಂತಿಸಬೇಕಿದೆ.
ಕೃಷಿ ವಿವಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವವರೆಗೂ ನಿರಂತರ ಧರಣಿ, ಪ್ರತಿಭಟನೆಗೆ ನಮ್ಮ ಕರವೇ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಮುಂಚಿತವಾಗಿ ಕೃಷಿ ಕಾಲೇಜಿನಿಂದ ಭೀ.ಗುಡಿ ಬಾಪುಗೌಡ ವೃತ್ತದವರಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಪತ್ತರ ಸಲ್ಲಿಸಲಾಯಿತು. ಕೃಷಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅಲ್ಲದೆ ಕರವೇ ಮುಖಂಡರು ಕಾರ್ಯಕರ್ತರು ಇದ್ದರು.