ಪ್ರಮುಖ ಸುದ್ದಿ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸಚಿವ ಡಿ.ಕೆ.ಶಿವಕುಮಾರ್ ಸವಾಲು!
ಬೆಂಗಳೂರು : ನಾನೇನು ಚಕ್ ಮೂಲಕ ಹಣ ಪಡೆದು ಭ್ರಷ್ಟಾಚಾರ ಮಾಡಿಲ್ಲ. ಇನ್ನೂ ನನಗೆ ಎಷ್ಟು ಚಿತ್ರಹಿಂಸೆ ಕೊಡುತ್ತಾರೋ ಕೊಡಲಿ ಎಂದು ಹೇಳುವ ಮೂಲಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ಜಲಸಂಪನ್ಮೂಲ ಇಲಾಖೆಯಲ್ಲಿ ಕಳೆದ ಸರ್ಕಾರದ ವೇಳೆ ನಡೆದ ಕಾಮಗಾರಿಗಳಿಗೂ ಸಹ ಬಿಲ್ ಮಾಡುವ ವೇಳೆ ಕಮಿಷನ್ ಇಲ್ಲದೆ ಮಾಡಲಾಗದ. ಈಗಾಗಲೇ ಕಮಿಷನ್ ನೀಡಿದ್ದರೂ ಸಹ ಈಗ ಮತ್ತೊಮ್ಮೆ ಕಮಿಷನ್ ನೀಡಲೇಬೇಕು ಎಂದು ಹೇಳಲಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದರು.
ಮಾಜಿ ಸಿಎಂ ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್ ಸಾಕ್ಷಾಧಾರಗಳಿದ್ದರೆ ಎಸಿಬಿಗೆ ದೂರು ನೀಡಲಿ. ನಾನಿನ್ನೂ ಇಲಾಖೆಯ ಫೈಲುಗಳನ್ನೇ ನೋಡಿಲ್ಲ. ಆಗಲೇ ಭ್ರಷ್ಟಾಚಾರದ ಆರೋಪ ಹೊರಿಸಲಾಗುತ್ತಿದೆ. ನಾನು ಯಾವುದೇ ತನಿಖೆಗೂ ಸಿದ್ಧವಿದ್ದೇನೆ ಎಂದು ಸವಾಲು ಹಾಕಿದ್ದಾರೆ.