ಜನಮನಪ್ರಮುಖ ಸುದ್ದಿ
#BhagavanModi : ‘ಜೈ ನರೇಂದ್ರ ಮೋದಿ’ ಅಂದರು ಸಾಹಿತಿ ಕೆ.ಎಸ್.ಭಗವಾನ್!
ಸಾಹಿತಿ ಹಾಗೂ ವಿಚಾರವಾದಿ ಕೆ.ಎಸ್.ಭಗವಾನ್ ಅವರು ನೀಡಿದ ಪತ್ರಿಕಾ ಪ್ರಕಟಣೆ ಈ ಕೆಳಗಿನಂತಿದೆ.
ಸುಮಾರು 72ವರ್ಷಗಳಿಂದ ಸಂಕಟದಲ್ಲಿ ನರಳುತ್ತಿದ್ದ ಕಾಶ್ಮೀರದ ಜನತೆಯನ್ನು ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ಅವರು ಆರ್ಟಿಕಲ್ 370 ವಿಧಿ ರದ್ದು ಮಾಡುವ ಮೂಲಕ ರಾಷ್ಟ್ರವನ್ನು ಸಂತಸ ಪಡಿಸಿದ್ದಾರೆ. ಪ್ರತಿದಿನ ಏನಿಲ್ಲ ಅಂದರೂ 7-8ಕೋಟಿ ರೂಪಾಯಿಗಳು ವ್ಯರ್ಥವಾಗಿ ಖರ್ಚಾಗುತ್ತಿದ್ದವು. ಅದನ್ನು ಜನತೆಯ ಕಲ್ಯಾಣಕ್ಕಾಗಿ ಅಭಿವೃದ್ಧಿಗಾಗಿ ಇನ್ನುಮುಂದೆ ಬಳಸಲು ಅನುಕೂಲವಾಗುತ್ತದೆ.
‘ಆರ್ಟಿಕಲ್ 370, 35a ರದ್ದು ಮಾಡಿ ರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ತಂದಿದ್ದಾರೆ. 72 ವರ್ಷಗಳ ಸಂಕಟವನ್ನ ವಿಮುಕ್ತಿ ಮಾಡಿದ್ದು ಒಳ್ಳೆಯ ನಿರ್ಧಾರ. ಇಡೀ ದೇಶವನ್ನ ಒಂದೇ ಸಂವಿಧಾನದಡಿ ತಂದದ್ದು ಶ್ಲಾಘನೀಯ. ಮೋದಿ ಹೆಸರು ಇನ್ನು ಮುಂದೆ ಇತಿಹಾಸದಲ್ಲಿ ಅಜರಾಮರವಾಗಲಿದೆ. ಮೋದಿ ಹೆಸರನ್ನ ಹೇಳಲು ನನಗೆ ಸಂತೋಷ ಮತ್ತು ಹೆಮ್ಮೆಯಾಗುತ್ತದೆ. ಜೈ ನರೇಂದ್ರ ಮೋದಿ.
ಕೆ.ಎಸ್.ಭಗವಾನ್
ವಿಚಾರವಾದಿಗಳು ಹಾಗೂ ಸಾಹಿತಿಗಳು
ಮೈಸೂರು