ಪ್ರಮುಖ ಸುದ್ದಿ
‘ಮೀಸಲಾತಿ ವಿಚಾರದಲ್ಲಿ ಚರ್ಚೆ ಒಂದೇ ದಾರಿ’ – ಮೋಹನ್ ಭಾಗವತ್
ನವದೆಹಲಿ: ಮೀಸಲಾತಿ ವಿಚಾರದಲ್ಲಿ ಚರ್ಚೆ ನಡೆಸುವುದೊಂದೇ ದಾರಿ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸಿದ್ದ ಜ್ಞಾನ್ ಉತ್ಸವ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೀಸಲಾತಿ ವಿಚಾರದಲ್ಲಿ ಒಂದೇ ಒಂದು ದಾರಿ ಇದೆ. ಮೀಸಲಾತಿಯನ್ನು ವಿರೋಧಿಸುವವರು ಮತ್ತು ಮೀಸಲಾತಿ ಬೇಕು ಎಂದು ವಾದಿಸುವವರು ಒಂದೇ ವೇದಿಕೆಯಲ್ಲಿ ಕುಳಿತು ಸೌಹಾರ್ಧಯುತ ಮಾತುಕತೆ ನಡೆಸಬೇಕು. ಆಗ ಸಮಸ್ಯೆ ಖಂಡಿತ ಬಗೆಹರಿಯಲಿದೆ ಎಂದು ಮೋಹನ್ ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೋಹನ್ ಭಾಗವತ್ ಹೇಳಿಕೆಗೆ ವ್ಯಾಪಕ ಟೀಕೆಗಳು ಎದುರಾಗಿದ್ದು ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಇದೇ ಸಂದರ್ಭದಲ್ಲಿ ಆರ್ ಎಸ್ ಎಸ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಆರ್ ಎಸ್ ಎಸ್ ಮೀಸಲಾತಿ ರದ್ದತಿ ಕುರಿತು ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ.