ರಾಜ್ಯಸಭೆಗೆ ಬಿಜೆಪಿಯ ಕಟ್ಟಾಳುಗಳ ಆಯ್ಕೆ, ರಾಜ್ಯ ಬಿಜೆಪಿಗೆ ಶಾಕ್
ರಾಜ್ಯಸಭೆಗೆ ಬಿಜೆಪಿಯ ಹಳೇ ಹುಲಿಗಳ ಆಯ್ಕೆ, ರಾಜ್ಯ ಬಿಜೆಪಿಗೆ ಶಾಕ್
ವಿವಿ ಡೆಸ್ಕ್ಃ ರಾಜ್ಯಸಭೆಯ ಎರಡು ಸ್ಥಾನಗಳಿಗೆ ಕೇಂದ್ರ ಬಿಜೆಪಿ ಈ ಬಾರಿ ಉತ್ತರ ಕರ್ನಾಟಕದ ಹಳೇ ಬಿಜೆಪಿಯ ಸಾಮಾನ್ಯ ನಾಯಕರನ್ನು ಆಯ್ಕೆಗೊಳಿಸಿರುವದು ರಾಜ್ಯ ಬಿಜೆಪಿಗೆ ಬಿಗ್ ಶಾಕ್ ನೀಡಿದಂತಾಗಿದೆ.
ಹೈದ್ರಾಬಾದ್ ಕರ್ನಾಟಕದ ರಾಯಚೂರಿನವರಾದ ಅಶೋಕ ಗಸ್ತಿ ಮತ್ತು ಮುಂಬೈ ಕರ್ನಾಟಕ ಭಾಗದ ಬೆಳಗಾವಿ ಜಿಲ್ಲೆಯ ಈರಣ್ಣ ಕಡಾಡಿ ಅವರನ್ನು ಕೇಂದ್ರ ಬಿಜೆಪಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಮಾಡಿರುಬದು ಬಿಜೆಪಿಗರಲ್ಲಿಯೇ ಅಚ್ವರಿ ಮೂಡಿಸಿದೆ.
ಈ ಇಬ್ಬರು ನಾಯಕರು ಕಳೆದ 30 ವರ್ಷದಿಂದ ಬಿಜೆಪಿಯಲ್ಲಿ ಕಾರ್ಯಕರ್ತ ರಾಗಿ, ಆಯಾ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮತ್ತು ಮೊದಲಿಗೆ ಅಖಿಲ ಭಾರತ ಪರಿಷತ್ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ್ದರು. ಅಶೋಕ ಗಸ್ತಿ ಅವರು ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಬಳ್ಳಾರಿ ಜಿಲ್ಲೆಯ ಬಿಜೆಪಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅದೇ ರೀತಿ ಈರಣ್ಣ ಕಡಾಡಿ ಅವರು ಬೆಳಗಾವಿ ಜಿಲ್ಲೆಯ ಬಿಜೆಪಿ ಪ್ರಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಗಸ್ತಿ ಅವರು ಹಿಂದುಳಿದ ವರ್ಗದ ಸವಿತಾ ಸಮಾಜದವರಾಗಿದ್ದಾರೆ. ಈರಣ್ಣ ಕಾಡಾಡಿ ಅವರು ಪಂಚಮಸಾಲಿಯ ಲಿಂಗಾಯತ ಸಮುದಾಯ ದವರಾಗಿದ್ದಾರೆ ಎನ್ನಲಾಗಿದೆ.