ಭೀಮನ ಮಗ ಘಟೋದ್ಗಜನ ಅಸ್ತಿ ಪಂಜರ ಪತ್ತೆ.!
ಇದು ಭೀಮನ ಮಗ ಘಟೋದ್ಗಜನ ಅಸ್ತಿ ಪಂಜರವೇ.?
ಕುರುಕ್ಷೇತ್ರದಲ್ಲಿ ದೊರೆತಿದೆಯಂತೆ ಅಜಾನುಬಾಹು ಅಸ್ತಿಪಂಜರ
ವಿನಯವಾಣಿ ಡೆಸ್ಕ್ಃ ಅಜಾನುಬಾಹು ಗಾತ್ರದ ಅಸ್ತಿಪಂಜರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ವೈರಲ್ ಆಗಿದ್ದು, ಅದನ್ನು ಮಹಾಭಾರತದಲ್ಲಿ ಬರುವ ಭೀಮನ ಮಗ ಘಟೋದ್ಗಜ ಅಸ್ತಿ ಆಗಿದೆ ಎಂದು ಉಲ್ಲೇಖಿಸಲಾಗುತ್ತಿದೆ.
ಮಹಾಭಾರತ ಯದ್ಧ ನಡೆದ ಸ್ಥಳವಾದ ಕುರುಕ್ಷೇತ್ರದಲ್ಲಿ ಉತ್ಖನನ ವೇಳೆ ಈ ಅಸ್ತಿ ಪಂಜರ ದೊರೆತಿದೆ ಎಂದು ಹೇಳಲಾಗುತ್ತಿದೆ. ಅಂದಾಜು 80 ಅಡಿ ಉದ್ದವಿದೆ ಎಂದು ಬರೆಯಲಾಗಿದೆ. ಇದೀಗ ಇದು ಟ್ವಿಟರ್, ಫೇಸ್‍ಬುಕ್‍ಗಳಲ್ಲಿ ವೈರಲ ಆಗುತ್ತಿದೆ.
ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರ ಭೀಮನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದರಂತೆ ಅಜಾನುಬಾಹು ಗಾತ್ರ ಹೊಂದಿದ್ದ ಭೀಮನ ಮಗ ಘಟೋದ್ಗಜನ ಹಲವು ಸಂಗತಿಗಳು ಮಹಾಭಾರತ ಧಾರವಾಹಿ, ಚಲನಚಿತ್ರಗಳಲ್ಲಿ, ಗ್ರಾಮೀಣ ಭಾಗದ ಬಯಲಾಟ, ಡಪ್ಪಿನಾಟಗಳಲ್ಲಿ ಕಂಡು ಬರುವ ಪ್ರದರ್ಶನಗಳನ್ನು ನೋಡಿ ತಿಳಿದುಕೊಂಡಿದ್ದೀರಿ.
ಈಗ ಅದೇ ಘಟೋದ್ಗಜನ ಅಸ್ತಿ ಪಂಚರ ದೊರೆತಿದೆಯೇ.? ಎಂದು ಅಷ್ಟು ದೊಡ್ಡದಾದ ಅಸ್ತಿಪಂಜರ ಫೋಟೊ ಹರಿದಾಡುತ್ತಿರುವದು ನೋಡಿ ಜನ ಆಶ್ಚರ್ಯಗೊಂಡಿರುವದು ಮಾತ್ರ ನಿಜ.