ಪ್ರಮುಖ ಸುದ್ದಿ

ಮೌಢ್ಯ ಆಚರಣೆ ಸಮಾಜದ ಸ್ವಾಸ್ಥಕ್ಕೆ ಧಕ್ಕೆ- ಅಶ್ವಿನಿ

ಭೀಮಾ ಕೋರೆಗಾಂವ್- ಸಂಭ್ರಮದ ವಿಜಯೋತ್ಸವ

ಯಾದಗಿರಿ, ಶಹಾಪುರಃ ಅಂದಿನ ಐತಿಹಾಸಿಕ ಕಲ್ಪನೆಗಳ ಬೇಗುದಿಯಲ್ಲಿ ಕಂಡುಕೊಂಡ ಆಚರಣೆಗಳು ಮಾನವನ ಬದುಕಿಗೆ ಮಾರಕವಾಗಿದ್ದು, ಮೌಡ್ಯಗಳಿಗೆ ಮೊರೆ ಹೋದಲ್ಲಿ ಸಮಾಜದ ಸ್ವಾಸ್ತಕ್ಕೆ ಧÀಕ್ಕೆ ಉಂಟಾಗುತ್ತದೆ ಎಂದು ಚಿಂತಕಿ ಅಶ್ವಿನಿ ಮದನಕರ್ ಅಭಿಪ್ರಾಯಪಟ್ಟರು.

ನಗರದಲ್ಲಿ ಭೀಮಾ ಕೋರೆಗಾಂವ್ 201 ನೇ ವಿಜಯೋತ್ಸವ ಅಂಗವಾಗಿ ದಲಿತಪರ ಒಕ್ಕೂಟ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೋಮುವಾದಿಗಳಿಂದ ದೇಶದ ಮನಸ್ಸುಗಳು ಮುಗ್ಗರಿಸುತ್ತಿದ್ದು, ಮಾನವನಲ್ಲಿ ಅಪಮೌಲ್ಯದ ಚಿಂತನೆಗಳನ್ನು ಬಿತ್ತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಯುವ ಕೆಲಸವಾಗಬೇಕು. ಮೌಲ್ಯಯುಕ್ತ ವಿಚಾರದಡೆಗೆ ನಮ್ಮ ಚಿಂತನೆ ಸಾಗಲಿ.

ಗುಲಾಮಗಿರಿಗೆ ಒತ್ತು ನೀಡುವ ಇಲ್ಲದ ವಿಚಾರಗಳನ್ನು ಬಿತ್ತು ಬದಕನ್ನು ನಾಶಗೊಳಿಸುವ ಚಿಂತನೆಗೆ ಮನಸ್ಸು ಒಗ್ಗಿಕೊಳ್ಳದಿರಲಿ. ಯೋಚನಾಶಕ್ತಿ ಮೂಲಕ ಉತ್ತಮ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಿ. ಮುಗ್ಧ ಜನರನ್ನು ಮೌಢ್ಯದಿಂದ ಹೊರ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ.

ಭೀಮಾ ಕೋರೆಗಾಂವ್ ಯುದ್ಧ ಆತ್ಮಭಿಮಾನದ ಸಮರವಾಗಿದೆ. ದೇಶ ರಾಮರಾಜ್ಯ ವಾಗುವುದು ಬೇಡ ಭೀಮ ರಾಜ್ಯವಾಗಲಿ ಎಂಬ ಆಶಾ ಭಾವನೆಯನ್ನು ವ್ಯಕ್ತ ಪಡಿಸುತ್ತಾ, ಆಗ ಇಡಿ ದೇಶ ಸಮೃದ್ಧವಾಗಿ ಎಲ್ಲರೂ ಸಮಾನರಾಗಿ ಬದುಕು ನಡೆಸಲಿದ್ದಾರೆ ಎಂದರು.

ಉಪನ್ಯಾಸಕ ಭೀಮರಾಯ ಅಂಚೆಸೂಗೂರ ಮಾತನಾಡಿ, ಇತಿಹಾಸ ನಡೆದಿದ್ದ ಚರಿತ್ರೆ ಕುರಿತು ಅರ್ಥೈಸಿಕೊಳ್ಳಬೇಕು. ಚರಿತ್ರೆಕಾರರ ಕಲ್ಪನೆಗಳಿಂದ ಸೃಷ್ಟಿಸಲಾದ ಕಾಲ್ಪನಿಕ ವಸ್ತುಗಳು ಇಂದು ಐತಿಹಾಸಿಕ ಪುಟದಲ್ಲಿ ರಾರಾಜಿಸುತ್ತಿವೆ.

ಭೀಮಾ ಕೋರೆಗಾಂವ್ ಯುದ್ಧ ಯಾವ ಇತಿಹಾಸ ಪುಟ ಸೇರಿಸುವಲ್ಲಿ ಷಡ್ಯಂತ್ರ ನಡೆದಿದೆ. ಚರಿತ್ರಕಾರರು ಇಷ್ಟೊಂದು ಪರಾಕ್ರಮ ಕುರಿತು ಯಾಕೇ ಉಲ್ಲೇಖಿಸಲಿಲ್ಲ ಎಂಬುದು ಸಂಶಯ ಮೂಡುತ್ತಿದೆ. ದಲಿತರ ಪರಾಕ್ರಮದ ಬಗ್ಗೆ ದಾಖಲಿಸಲು ಇತಿಹಾಸಕಾರರು ಏಕೆ ಮನಸ್ಸು ಮಡಲಿಲ್ಲ ಎಂಬುದು ಯೋಚಿಸಬೇಕಿದೆ. ಆದಾಗ್ಯು ಕೋರೆಗಾಂವ್‍ನಲ್ಲಿ ಸ್ಥಾಪಿಸಲಾದ ವಿಜಯೋತ್ಸವ ಸಂಕೇತದ ದಲಿತ ಯೋಧರ ಸ್ಮಾರಕ ಇಂದಿಗೂ ಸವಿ ನೆನಪಾಗಿ ಹಜರಾಮರವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ದೇವಿಂದ್ರ ಹೆಗಡೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ನಿವೃತ್ತ ಶಿಕ್ಷಕ ಸಿದ್ದಪ್ಪ ಮಾಸ್ತರ ಕನ್ಯಾಕೋಳೂರ, ಮುಖಂಡರಾದ ನೀಲಕಂಠ ಬಡಿಗೇರ, ಮಾನಪ್ಪ ಹೊಸಮನಿ ಗೋಗಿ, ಶಿವಪುತ್ರ ಜವಳಿ, ಬಾಬುರಾವ್ ಭೂತಾಳೆ, ರಾಮಣ್ಣ ಸಾದ್ಯಾಪುರ, ದತ್ತಪ್ಪ ಗೊಂಗನ್, ನಾಗಣ್ಣ ಬಡಿಗೇರ, ಭೀಮರಾಯ ಹೊಸಮನಿ, ಶಿವುಕುಮಾರ ತಳವಾರ್, ಎಸ್‍ಡಿಪಿಐ ಮುಖಂಡ ಸಯ್ಯದ್ ಖಾಲಿದ್, ಡಾ.ಮರೆಪ್ಪ ನಾಟೇಕಾರ, ಮಾನಪ್ಪ ಗಡ್ಡದ, ರಾಯಪ್ಪ ಸಾಲಿಮನಿ, ಭೀಮರಾಯ ಜುನ್ನಾ, ನಿಜಗುಣ ದೋರನಳ್ಳಿ, ಬಾಲರಾಜ ಖಾನಾಪುರ, ಬಲಭೀಮ ಬೇವಿನಳ್ಳಿ, ಶರಬಣ್ಣ ರಸ್ತಾಪುರ, ಶರಣಪ್ಪ ಕೋಟೆ, ಗುರು ದೊಡ್ಮನಿ ಸೇರಿದಂತೆ ಇತರರಿದ್ದರು. ಶರಣು ದೋರನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವ ನಾಟೇಕಾರ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button