ಪ್ರಮುಖ ಸುದ್ದಿ
ಕಲಬುರಗಿ : ಭೋರ್ಗರೆಯುತ್ತಿರುವ ಭೀಮಾ ನದಿ, ಯಲ್ಲಮ್ಮ ದೇಗುಲ ಜಲಾವೃತ
ಕಲಬುರಗಿ : ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿದ ಪರಿಣಾಮ ಉಜನಿ ಮತ್ತು ವೀರಾ ನದಿ ಭೋರ್ಗರೆಯುತ್ತಿವೆ. ಪರಿಣಾಮ ಮಹಾರಾಷ್ಟರದಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು ಭೀಮಾ ನದಿಯೂ ತುಂಬಿ ಹರಿಯುತ್ತಿದ್ದು ಭೀಮಾತೀರದಲ್ಲೂ ಪ್ರವಾಹ ಭೀತಿ ಸೃಷ್ಠಿಯಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಯಲ್ಲಮ್ಮ ದೇಗುಲದ ಸೇತುವೆ ಪೂರ್ಣ ಮುಗಳುಗಡೆ ಆಗಿದ್ದು ದೇಗುಲ ಜಲಾವೃತಗೊಂಡಿದೆ.