ಪ್ರಮುಖ ಸುದ್ದಿ
ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು!
ವಿಜಯಪುರ: ಇಂಡಿ ಪಟ್ಟಣದ ಕೆಇಬಿ ಕಚೇರಿ ಬಳಿ ಭೀರಣ್ಣ ಪೂಜಾರಿ ಮತ್ತು ಸಿದ್ದು ಪ್ರಚಂಡಿ ಎಂಬುವರ ನಡುವೆ ಗಲಾಟೆ ನಡೆದಿದೆ. ನೂಕಾಟ ತಳ್ಳಾಟದ ವೇಳೆ ಬೀರಣ್ಣ ಪೂಜಾರಿ ಸಹಚರ ಸೈಫನ್ ಎಂಬ ವ್ಯಕ್ತಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಎದುರಾಳಿಗಳಿಗೆ ಬೆದರಿಕೆವೊಡ್ಡಿದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿದ ಸುದ್ದಿ ಇಂಡಿ ಪಟ್ಟಣದಲ್ಲಿ ಹಬ್ಬಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಇಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.