ಪ್ರಮುಖ ಸುದ್ದಿ
ಕೆ.ಜಿ.ಭೊಪಯ್ಯ ಮತ್ತೆ ಸ್ಪೀಕರ್, ಮಾಜಿ ಸಿಎಂ ಶೆಟ್ಟರ್ ಬಿಎಸ್ ವೈ ಸಂಪುಟದಲ್ಲಿ ಮಿನಿಸ್ಟರ್!
ಬೆಂಗಳೂರು : ಇಂದು ರಮೇಶ್ ಕುಮಾರ್ ರಾಜೀನಾಮೆ ನೀಡಿದ್ದು ಸ್ಪೀಕರ್ ಸ್ಥಾನ ತೆರವು ಮಾಡಿದ್ದಾರೆ. ವಿರಾಜಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಕೆ.ಜಿ.ಭೊಪಯ್ಯ ಅವರನ್ನು ಮತ್ತೆ ಸ್ಪೀಕರ್ ಸ್ಥಾನಕ್ಕೆ ಕೂರಿಸಲು ಬಿಜೆಪಿ ನಿರ್ಧರಿಸಿದೆ . ನಾಳೆ ಕೆ.ಜಿ.ಭೊಪಯ್ಯ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಸ್ಪೀಕರ್ ಆಗಿಯೂ ಕಾರ್ಯ ನಿರ್ವಹಿಸಿದ ಅನುಭವ ಇರುವ ಮಾಜಿ ಸಿಎಂ ಜಗದೀಶ್ ಶೆಟ್ಡರ್ ಸ್ಪೀಕರ್ ಸ್ಥಾನ ಅಲಂಕರಿಸಲು ನಿರಾಕರಿಸಿದ್ದಾರೆ. ಅಲ್ಲದೆ ಬಿ.ಎಸ್.ಯಡಿಯೂರಪ್ಪ ಹಿರಿಯ ನಾಯಕರಾಗಿರವ ಕಾರಣ ಅವರ ಸಂಪುಟದಲ್ಲಿ ಮಂತ್ರಿ ಆಗಲು ನಾನು ರೆಡಿ ಎಂದು ಪಕ್ಷದ ನಾಯಕರಿಗೆ ತಿಳಿಸಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.