ಪ್ರಮುಖ ಸುದ್ದಿ
ಕಾಯ್ದೆ ಹಿಂಪಡೆಯಲು ಒಪ್ಪದ ಕೇಂದ್ರ ಸರ್ಕಾರ
ಕಾಯ್ದೆ ಹಿಂಪಡೆಯಲು ಒಪ್ಪದ ಕೇಂದ್ರ ಸರ್ಕಾರ
ದೆಹಲಿಃ ರೈತ ನಾಯಕರ ಜೊತೆ ಸಂಜೆ 7 ಗಂಟೆಗೆ ಸಭೆ ನಡೆಸಿದ ಗೃಹ ಸಚಿವ ಅಮಿತ್ ಶಾ ಹೊಸ ಕಾಯ್ದೆ ಯಾರ ಪರವಾಗಿವೆ.? ಇದರಿಂದ ರೈತರಿಗೇನು ಲಾಭವಿದೆ.? ಎಂಬುದು ಮೊದಲು ಅರಿಯಿರಿ. ವಿಪಕ್ಷಗಳು ನೀಡಿದ ಸುಳ್ಳು ಮಾಹಿತಿ ಗ್ರಹಿಸಿಕೊಂಡು ವಿರೋಧಿಸುವದು ಸರಿಯಲ್ಲ ಎಂದು ಗೃಹ ಸಚಿವ ಅಮಿತ್ ಶಾ ರೈತರ ಮನವೊಲೀಸಲು ಮುಂದಾದರೂ ಎಂದು ತಿಳಿದು ಬಂದಿದೆ.
ಆದರೆ ನೂತನ ಕೃಷಿ ಕಾಯ್ದೆಗಳು ಹಿಂಪಡೆಯುವ ಪ್ರಶ್ನೆ ಇಲ್ಲವೆಂದು ತಿಳಿಸಿದ್ದಾರೆ ಎನ್ನಲಾಗಿದೆ. ಇದೀಗ ರೈತ ನಾಯಕರೊಂದಿಗಿನ ನಡೆದ ಸಭೆ ಮುಕ್ತಾಯಗೊಂಡಿದ್ದು, ಮಾತುಕತೆ ಕುರಿತು ವಿಷಯ ಹೊರಬೀಳಲಿದೆ ಎನ್ನಲಾಗಿದೆ. ಆದರೆ ಕೃಷಿ ಕಾಯ್ದೆಗಳು ಹಿಂಪಡೆಯಲಾಗದು ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.