ಬಿಗ್ ಬಾಸ್ ಮನೆಯಿಂದ “ಮಾನಸ” OUT ಸಂಡೇ ವಿತ್ ಸುದೀಪ್ ಸಂಚಿಕೆಯಲ್ಲಿ ವೇದಿಕೆಗೆ ಆಗಮನ
ಬಿಗ್ ಬಾಸ್ ಕನ್ನಡ ಸೀಸನ್ - 11
ಬಿಗ್ ಬಾಸ್ ಮನೆಯಿಂದ “ಮಾನಸ” OUT
ಸಂಡೇ ವಿತ್ ಸುದೀಪ್ ಸಂಚಿಕೆಯಲ್ಲಿ ವೇದಿಕೆಗೆ ಆಗಮನ
ಬೆಂಗಳೂರಃ ಕನ್ನಡ ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಇಂದಿಗೆ ಒಂದು ತಿಂಗಳು ದಾಟಿ ಮುಂದಡಿ ಇಟ್ಟಿದೆ.
ಮನೆಯಲ್ಲಿ ಸ್ಪರ್ಧಿಗಳ ಆಟೋಟ, ಜಗ್ಗಾಟ ಜೋರಾಗಿದೆ.
ಕಳೆದ ವಾರವಷ್ಟೇ ನಟ, ನಿರೂಪಕ ಸುದೀಪ್ ಅವರ ತಾಯಿಯವರ ಅಗಲಿಕೆಯಿಂದಾಗಿ, ಅವರ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ವಾರಾಂತ್ಯ ಮುಂದುವರೆದಿತ್ತು.
ಆದರೆ, ಐದನೇ ವಾರಕ್ಕೆ ಕಿಚ್ಚ ಸುದೀಪ್, ತಾಯಿಯ ಅಗಲಿಕೆಯ ನೋವಿದ್ದರೂ, ಭಾರವಾದ ಮನಸ್ಸಿನಿಂದಲೇ ವಾರದ ಕಥೆ ಕಿಚ್ಚನ ಜತೆ ಸಂಚಿಕೆಗೆ ಆಗಮಿಸಿ ಎಂದಿನಂತೆ ಮುಂದುವರೆಸಿದ್ದಾರೆ.
ಇಂದು ನಡೆದ ಸೂಪರ್ ಸಂಡೆ ವಿತ್ ಸುದೀಪ ಸಂಚಿಕೆಯಲ್ಲಿ ಐದನೇ ವಾರದಂದು ಮನೆಯಿಂದ ಹೊರಬಿದ್ದವರು ಯಾರು ಎಂಬುದನ್ನು ಸುದೀಪ್ ಅವರು ಅಧಿಕೃತವಾಗಿ ಘೋಷಿಸಿದರು.
ವಾರದ ಕಥೆ ಕಿಚ್ಚನ ಜತೆ ಸಂಚಿಕೆಯ ಆರಂಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಹಾಗೂ ತಂಡದ ಸದಸ್ಯರು ಸುದೀಪ್ ಅವರ ತಾಯಿಗೆ ಹಾಡಿನ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಈ ವಿಷಯಕ್ಕೆ ಧನ್ಯವಾದ ತಿಳಿಸಿದ ಸುದೀಪ್ ಅವರು, ತದನಂತರ ಎಂದಿನಂತೆ ಕಾರ್ಯಕ್ರಮ ನಡೆಸಿಕೊಟ್ಟರು. ಶನಿವಾರ ಮನೆ ಮಂದಿಗೆಲ್ಲಾ ತಮ್ಮ ಖಡಕ್ ಮಾತಿನಿಂದಲೇ ಅವರವರ ತಪ್ಪುಗಳನ್ನು ಎತ್ತಿಹಿಡಿದ ಕಿಚ್ಚ, ಅಲ್ಲಲ್ಲಿ ಕೆಲವರಿಗೆ ಬುದ್ಧಿ ಹೇಳಿ, ತಿದ್ದಿ ತೀಡಿದರು.
ಇನ್ನು ಭಾನುವಾರದ ಸಂಚಿಕೆಯಲ್ಲಿ ತಮಾಷೆ, ಮೋಜು-ಮಸ್ತಿಗೆ ಹೆಚ್ಚು ಸಮಯ ಕೊಟ್ಟ ಸುದೀಪ್, ಧನರಾಜ್-ಮಂಜು ಕಾಂಬಿನೇಷನ್ನಲ್ಲಿ ಹಾಸ್ಯ ಅರಳಿಸಿದ್ದು ವೀಕ್ಷಕರಲ್ಲಿ ನಗೆ ತರಿಸಿತು.
ಈ ನಗುವಿನ ಸಿಹಿಯ ಜತೆಗೆ ಸಂಚಿಕೆಯ ಕಡೆಯಲ್ಲಿ ಕಹಿ ಉಣಿಸಿದ ಕಿಚ್ಚ, ಮಾನಸಾ ಅವರು ಎಲಿಮಿನೇಟ್ ಆಗಿದ್ದೀರಾ ಎಂದು ತಿಳಿಸಿದರು.