ಶೂ ಭಾಗ್ಯ ಯೋಜನೆಃ ಸ್ಥಳೀಯರಿಗೆ ವಂಚನೆ ಕರವೇ ಆರೋಪ
ಯಾದಗಿರಿ: ಶೂ ಭಾಗ್ಯ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ವಿತರಿಸಬೇಕಾದ ಶೂಗಳನ್ನು ಬೇರೆ ಜಿಲ್ಲೆಯಿಂದ ಅಂದರೆ ಪಂಜಾಬ್ ಪುಟ್ ಹೌಸ್ ಏಜೆನ್ಸಿ ಮೂಲಕ ಸರಬರಾಜು ಆಗುತ್ತಿರುವ ಶ್ಯೂಗಳನ್ನು ತಡೆಹಿಡಿದು, ಸದರಿ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿ ಈಗಾಗಲೇ ಕೆಲವು ಶಾಲೆಗಳಲ್ಲಿ ಶ್ಯೂ ವಿತರಣೆ ಮಾಡಿರುವ ಬಿಲ್ ಪಾವತಿ ಮಾಡದಂತೆ ತಡೆಯಬೇಕು ಮತ್ತು ಸ್ಥಳೀಯ ಜಿಲ್ಲೆಯ ಪುಟ್ ಏಜೆನ್ಸಿಯವರಿಗೆ ಸರಬರಾಜು ಮಾಡಲು ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲ ಯುವ ಘಟಕದ ಅಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಂಗಳವಾರ ಮನವಿ ಸಲ್ಲಿಸಿದ ಮಾತನಾಡಿದ ಜಿಲ್ಲಾ ಯುವ ಘಟಕದ ಅದ್ಯಕ್ಷ ವಿಶ್ವಾರಾಧ್ಯ ದಿಮ್ಮೆ ಸರ್ಕಾರದ ಶೂ ಭಾಗ್ಯ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ವಿತರಿಸಬೇಕಾದ ಶ್ಯೂಗಳನ್ನು ಬೇರೆ ಜಿಲ್ಲೆಯಿಂದ ಅಂದರೆ ಪಂಜಾಬ್ ಪುಟ್ ಹೌಸ್‍ನಿಂದ ತರಿಸಿ, ಇವರ ಮುಖಾಂತರ ಬಲವಂತವಾಗಿ ಪ್ರಭಾವಿ ರಾಜಕೀಯ ವ್ಯಕ್ತಿಗಳ ಬೆಂಬಲದಿಂದ ಮತ್ತು ಜಿಲ್ಲಾ ಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರುಗಳು ಸೇರಿಕೊಂಡು ಈ ಏಜೆನ್ಸಿಯವರೊಂದಿಗೆ ಶ್ಯಾಮೀಲಾಗಿ ನಿಯಮಗಳನ್ನು ಉಲ್ಲಂಘನೆ ಮಾಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶ್ಯೂಗಳನ್ನು ಕಾನೂನು ಬಾಹಿರವಾಗಿ ಸರಬರಾಜು ಮಾಡುತ್ತಿದ್ದು, ಇದರಿಂದಾಗಿ ಜಿಲ್ಲೆಯಲ್ಲಿರುವ ಪುಟ್ ಏಜೆನ್ಸಿಯವರಿಗೆ ದ್ರೋಹ ಮಾಡಿರುತ್ತಾರೆ.
ಸರ್ಕಾರದ ಸ್ಪಷ್ಟ ನಿಯಮದಂತೆ ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಮುಖ್ಯ ಗುರುಗಳೇ ಸ್ಥಳೀಯ ಶೂ ವಿತರಕರನ್ನು ಗುರುತಿಸಿ ಅವರಿಂದ ಶೂ ತರಿಸಿ ವಿತರಿಸಬೇಕೆಂಬ ನಿಯಮವಿದ್ದರೂ ಕೂಡಾ ಇವೆಲ್ಲವನ್ನು ಗಾಳಿಗೆ ತೂರಿ ತಮಗೆ ಬೇಕಾದವರಿಗೆ ಅಂದರೆ ಹೊರಗಿನ ಜಿಲ್ಲೆಯವರಿಂದ ಶೂ ವಿತರಣೆ ಮಾಡಿಸುತ್ತಿದ್ದು, ಇದರಿಂದಾಗಿ ಸ್ಥಳೀಯ ಪುಟ್‍ವೇರ್ ವ್ಯಾಪಾರಿ ಏಜೆನ್ಸಿಯವರು ಲಕ್ಷಾಂತರ ರೂಪಾಯಿಗಳನ್ನು ಬಂಡಾವಳ ಹಾಕಿ ವ್ಯಾಪಾರ ಮಾಡುತ್ತಿರುವವರಿಗೆ ಜಿಲ್ಲಾ ಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರುಗಳು ಕೂಡಿಕೊಂಡು ಈ ಬಡ ವ್ಯಾಪಾರಿಗಳಿಗೆ ನಷ್ಟವುಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ಮಾತನಾಡಿ, ಜಿಲ್ಲೆಯಲ್ಲಿಯ ವ್ಯಾಪ್ತಿಯಲ್ಲಿ ಬರುವ ಯಾದಗಿರಿ ಮತ್ತು ಗುರುಮಠಕಲ್ ಹಾಗೂ ಇನ್ನಿತರ ಪಟ್ಟಣಗಳಲ್ಲಿ ಪುಟ್‍ವೇರ್ ವ್ಯಾಪಾರ ಮಾಡುತ್ತಿರುವ ಏಜೆನ್ಸಿಯವರಿಗೆ ನೂತನ ಜಿಲ್ಲೆಯಾದಾಗಿನಿಂದಲೂ ಇಲ್ಲಿಯವರೆಗೆ ಯಾವುದೇ ರೀತಿಯ ಟೆಂಡರ್ ಪ್ರಕ್ರಿಯೆ ಮಾಡದೆ ಮತ್ತು ಸ್ಥಳೀಯ ಏಜೆನ್ಸಿಯವರಿಗೆ ನೀಡದೆ ಜಿಲ್ಲಾಡಳಿತವು ನಿರ್ಲಕ್ಷತನ ತೋರಿರುವುದು ಕಂಡು ಬಂದಿರುತ್ತದೆ. ಅಲ್ಲದೆ ಸ್ಥಳೀಯವರಿಗೆ ನೀಡಿದ್ದಲ್ಲಿ ಸ್ಥಳೀಯ ವ್ಯಾಪಾರಿಗಳು ಉದ್ಯಮದಲ್ಲಿ ಬಲಿಷ್ಠವಾಗುವುದಲ್ಲದೆ ನಿರುದ್ಯೋಗಿ ತೊಲಗಿದಂತಾಗುತ್ತದೆ.
ಈಗಾಗಲೇ ಕೆಲವು ಸರಕಾರಿ ಶಾಲೆಗಳಲ್ಲಿ ಶೂ ಸರಬರಾಜನ್ನು ಮಾಡಿರುವ ಬಿಲ್ ಪಾವತಿಯನ್ನು ತಡೆಹಿಡಿದು, ಪಂಜಾಬ ಪುಟ ಹೌಸ್ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿ ಸ್ಥಳೀಯ ಪುಟವೇರ್ ಏಜೆನ್ಸಿಗಳಿಗೆ ಆದ್ಯತೆ ನೀಡಬೇಕು. ಮತ್ತು ಇನ್ನು ಆಯಾ ಶಾಲೆಯ ಶಿಕ್ಷಕರಾದರೋ ಅವರು ರಾಜಕೀಯ ಪ್ರಬಲ ವ್ಯಕ್ತಿಗಳನ್ನು ಎದುರು ಹಾಕಿಕೊಳ್ಳಲಾಗದೆ ಮೂಕ ಪ್ರೇಕ್ಷಕರಾಗಿ ಕುಳಿತಿರುವುದರಿಂದ ಜಿಲ್ಲೆಯ ಎಲ್ಲ ಶೂ ವಿತರಕರು ಮಾರಾಟಗಾರರಿಗೆ ಅಥವಾ ಏಜೆನ್ಸಿಯವರಿಗೆ ಅನ್ಯಾಯವೆಸಗಿದಂತಾಗಿದೆ. ಹಾಗೂ ಒಂದು ವೇಳೆ ಈಗಾಗಲೇ ಸರಕಾರಿ ಶಾಲೆಗಳಲ್ಲಿ ಶೂ ಸರಬರಾಜು ಆಗಿದ್ದು, ಈ ಬಿಲ್‍ಗಳ ಪಾವತಿಯನ್ನು ಸದರಿ ಶಾಲೆಗಳ ಮುಖ್ಯಗುರುಗಳು ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರು ಬಿಲ್ಲ ಪಾವತಿಸಲು ಅನುಕೂಲ ಮಾಡಿಕೊಟ್ಟರೆ ಅವರೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ಆದ್ದರಿಂದ ತಾವುಗಳು ಹೊರ ಜಿಲ್ಲೆಯಿಂದ ಕಾನೂನು ಬಾಹಿರವಾಗಿ ಪಂಜಾಬ ಪುಟ ಹೌಸ್ ಏಜೆನ್ಸಿಯವರ ಸರಬರಾಜು ಮಾಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಈ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿ, ಸ್ಥಳೀಯ ಪುಟ್‍ವೇರ್ ಏಜೆನ್ಸಿಗಳಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡಲು ಅನುಕೂಲ ಮಾಡಿಕೊಟ್ಟರೆ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸಿದಂತಾಗುತ್ತದೆ. ಒಂದು ವೇಳೆ ಸದರಿ ಏಜೆನ್ಸಿಯವರಿಗೆ ಮುಂದುವರೆಸಿದ್ದಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಚಿಗಾನೂರು, ಮಲ್ಲು ಹಾಲಗೇರಾ, ಅನಿಲ್ ದಾಸನಕೇರಿ, ದೀಪಕ ಒಡೆಯರ್, ರವಿ ನಾಯಕ ಜಮ್ಮಾರ, ರಿಯಾಜ ಪಟೇಲ್, ಸಿದ್ದು ಗುತ್ತೇದಾರ, ಸಿದ್ದು ಶಖಾಪುರ, ಸಿದ್ದಪ್ಪ ಕ್ಯಾಸಪನಳ್ಳಿ, ಬಸಲಿಂಗ ತುಮಕೂರ, ದೇವು ಕುರ್ಕುಂದ, ಭೀಮು ಮಳ್ಳಳ್ಳಿ ಸೇರಿದಂತೆ ಇನ್ನಿತರರು ಇದ್ದರು.