BIG BOSS SEASON-6 WON BY SHASHi
BIG BOSS SEASON-6 RUNNER UP NAVEEN
ಬೆಂಗಳೂರಃ ಬಿಗ್ ಸೀಸನ್ 6 ರಲ್ಲಿ ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಬಾಸ್ ನೀಡುವ ಟಾಸ್ಕ್ ಪ್ರಕಾರ ಆಟವಾಡಿ ಅಂತಿಮ ಫಿನಾಲೆವರೆಗೂ ಬಂದಿದ್ದ ನವೀನ್ ಮತ್ತು ಶಶಿಕುಮಾರ ನಡುವೆ ಸ್ಪರ್ಧೆ ಏರ್ಪಟ್ಟು ಅಂತಿಮವಾಗಿ ಶಶಿಕುಮಾರ ಬಿಗ್ ಬಾಸ್ ವಿನ್ನರ್ ಆದರೆ ನವೀನ ರನ್ನರ್ ಅಪ್ ಆಗಿ ಹೊರಹೊಮ್ಮಿದರು.
ಬಿಗ್ ಬಾಸ್ ಕಲ್ಪಿಸಿದ ವೇದಿಕೆಯಡಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುವದಲ್ಲದೆ, ತಮ್ಮ ವ್ಯಕ್ತಿತ್ವ ಸಮೇತ ಕರುನಾಡಲ್ಲದೆ ಇಡಿ ದೇಶದ ಜನರ ಮನ ಗೆದ್ದಿದ್ದಾರೆ.
ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಬಿಗ್ ಬಾಸ್ ಸ್ಪರ್ಧಿಗಳು ಮನೆ ಮಾತಾಗಿದ್ದಾರೆ. ಅಂತಿಮ ಸ್ಪರ್ಧೆಯಲ್ಲಿ 100 ನೇ ದಿನವಾದ ರವಿವಾರ ಮನೆಯಲ್ಲಿ ಕವಿತಾ, ನವೀನ ಮತ್ತು ಶಶಿಕುಮಾರ ಉಳಿದಿದ್ದರು. ಕೊನೆ ಕ್ಷಣದಲ್ಲಿ ಕವಿತಾ ಹೊರಬಂದರು.
ಅಂತಿಮವಾಗಿ ಮನೆಯಲ್ಲಿ ಉಳಿದಿದ್ದ ಶಶಿ ಮತ್ತು ನವೀನ ಅವರನ್ನು ನಟ ಸುದೀಪ ಮನೆಯೊಳಗೆ ಪ್ರವೇಶಿಸಿ ವೇದಿಕೆಗೆ ಕರೆ ತಂದರು. ನಟ ಸುದೀಪ ಸುತ್ತಿ ಬಳಸಿ ಮಾತಾಡುತ್ತಾ ಇನ್ನೇನು ಫೈನಲ್ ನಲ್ಲಿ ವಿನ್ನರೊಬ್ಬರ ಕೈ ಎತ್ತಲೂ ಪೇಚಾಡುತ್ತಾ ವೀಕ್ಷಕರಲ್ಲಿ ತಳಮಳ ಮೂಡಿಸುತ್ತಾ ಕೊನೆಗೆ ರಾತ್ರಿ 11-50 ಗಂಟೆಗೆ ಶಶಿಯವರ ಕೈಯನ್ನು ಮೇಲೆತ್ತುವ ಮೂಲಕ ಬಿಗ್ ಬಾಸ್ ವಿನ್ನರ್ ಎಂದು ಘೋಷಿಸಿದರು. ನವೀನ್ ಅವರ ರನ್ನರ್ ಅಪ್ ಆಗಿ ಉಳಿಯಬೇಕಾಯಿತು.
ಬಿಗ್ ಬಾಸ್ ಸೀಸನ್ ಕಾರ್ಯಕ್ರಮವನ್ನು ಅಚ್ವುಕಟ್ಟಾಗಿ ನಡೆಸಿಕೊಡುತ್ತಿರುವ ಮೇರು ನಟ ಸುದೀಪ್ ಅವರ ಬುದ್ಧಿ ಶಕ್ತಿ, ಅವರ ಮಾತಿನ ಶೈಲಿ, ಬಿಗ್ ಬಾಸ್ ಸ್ಪರ್ಧಿಗಳಿಗೆ ತಪ್ಪು ಸರಿ ಕುರಿತು ಮಾಡುವ ಪಾಠ ಅವರ ಅದ್ಭುತ ಧ್ವನಿ ಮೆರಗು ನೀಡುವಂತಹದ್ದು, ಸುದೀಪ್ ಅವರ ಪಂಚಿಂಗ್ ಡೈಲಾಗ್ ಸ್ಪರ್ಧಿಗಳ ನಡುವೆ ತುಂಟಾಟ, ಪ್ರತಿಭೆ ಕುರಿತು ಶಹಬ್ಭಾಶಗಿರಿ ಹೀಗೆ ಮುಂದುವರೆಸುವ ಅವರ ಮಾತಿನ ಲಹರಿ ಪ್ರತಿ ವೀಕೆಂಡ್ ವೀಕ್ಷಣೆಗೆ ಜನಮನಸೂರೆಗೊಳ್ಳುವಂತೆ ಮಾಡಿತ್ತು.