ಬಿಗ್ ಬಾಸ್ LUNCH ಮೆನುಃ ಚಂದನಾ, ಶೈನ್ ಮತ್ತು ವಾಸುಕಿ.!
ವಿವಿ ಡೆಸ್ಕ್ಃ ಊಟದೊಂದಿಗೆ ಒಂದಿಷ್ಟು ಉಪ್ಪಿನಕಾಯಿ ಇದ್ರೆ ಬಾಯಿ ಚಪ್ಪರಿಸಿ ತಿನ್ನಬಹುದು. ಉಪ್ಪಿನ ಕಾಯಿ ಎಂದಾಕ್ಷಣ ಬಾಯಿಯಲ್ಲಿ ನೀರೂರಿಸುವದು ಸಹಜ. ಬಿಸಿ ಬಿಸಿಯಾದ ಅನ್ನ ಸಾಂಬಾರ ಜೊತೆ ಒಂದಿಷ್ಟು ಹುಳಿ ಮಾವಿನ ಉಪ್ಪಿನ ಕಾಯಿ ನಾಲಿಗೆ ಹಚ್ಚಿಕೊಂಡರೆ ಅಬ್ಬಾ ಏನ್..ರುಚಿ ಏನ್ ಟೇಸ್ಟ್..ಆಹ್ಹಾ…
ಆದರೆ ಬಿಗ್ ಬಾಸ್ ಮನೆಯ ಊಟದ ಮೆನು ಬೇರೆ ರೀತಿಯೇ ಇದೆ. ಇಲ್ಲಿ ಅನ್ನ ಸಾಂಬಾರ ಮತ್ತ ಉಪ್ಪಿನಕಾಯಿ ಅಂದ್ರೆ ಅದು ಚಂದನಾ, ಶೈನ್ ಮತ್ತು ವಾಸುಕಿ.
ಬಿಗ್ ಬಾಸ್ ಮನೆಯಲ್ಲಿ ಇದೇನು ಹೊಸ ಲೆಕ್ಕಾಚಾರ ಅಂತ ಹುಬ್ಬೇರಿಸಬೇಡಿ. ಅದು ಬಿಗ್ ಬಾಸ್ ವೀಕ್ಷಕರಿಗೆ ಪಕ್ಕಾ ಗೊತ್ತು. ಬಿಗ್ ಬಾಸ್ ವೀಕ್ ಎಂಡ್ ನಲ್ಲಿ ಬರುವ ಕಿಚ್ಚ ಸುದೀಪ್ ಈ ಮನೆಯಲ್ಲಿ ಪ್ಲೇನ್ ರೈಸ್ ಯಾರು ಅಂದಾಗ ಎಲ್ಲರೂ ಚಂದನಾ ಅಂತಾ ಹೇಳಿದ್ರು. ಆದರೆ ಸಾಂಬಾರ್ ಅಂತಾ ಕೇಳಿದ್ದಕ್ಕೆ ಶೈನ್ ಹೇಸರೇಳಿದ್ರು, ಆ ಮೇಲೆ ಉಳಿದಿರೋದು ಉಪ್ಪಿನಕಾಯಿ ಅದು ವಾಸುಕಿ ಎಂದು ಸುದೀಪ ಹಾಗೂ ಮನೆಯವರು ಹೇಳೋದಕ್ಕಿಂತ ಮುಂಚೆ ವೀಕ್ಷಕರೇ ಹೇಳಿದ್ದಾರೆ ಬಿಡಿ.
ಈ ಸಂದರ್ಭದಲ್ಲಿ ವಾಸುಕಿ ಮಾತನಾಡುತ್ತಾ.ಹೌದು ಸರ್ ನನ್ನ ಉಪ್ಪಿನಕಾಯಿ ಮಾಡ್ಬಿಟ್ಟಿದ್ದಾರೆ. ಬೇಕಾದಾಗ ಮಾತ್ರ ರುಚಿ ತಗೊತ್ತಾರೆ ಎಂದು ಟಾಂಗ್ ನೀಡಿದರು. ಒಟ್ಟಾರೆ ಮನೆಯಲ್ಲಿ ಅನ್ನ ಸಾಂಬಾರ ಮತ್ತು ಉಪ್ಪಿನಕಾಯಿ ಅಂತ ಹೆಸರು ಮಾತ್ರ ನಾಮಾಕರಣ ವಾಯಿತು. ಇದರ ಹಿಂದಿನ ಸತ್ಯಾಸತ್ಯತೆ ಸ್ಪರ್ಧಿಗಳಿಗೆ ಗೊತ್ತು ಬಿಡಿ.