ಪ್ರಮುಖ ಸುದ್ದಿ
ಬಿಹಾರದಲ್ಲಿ NDA & MGB ಹಾವು ಏಣಿ ಆಟ
ಬಿಹಾರಃ ಚುನಾವಣೆ ಫಲಿತಾಂಶ
ಬಿಹಾರಃ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಎನ್ ಡಿಎ ಮತ್ತು ಎಂಜಿಬಿ ಅಂದರೆ ಮಹಾಘಟ ಬಂಧನ ನಡುವೆ ಹಾವು ಎಣಿ ಆಟ ನಡೆಯುತ್ತಿದ್ದು, ಸದ್ಯ NDA 119 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದು,
ಮಹಾಘಟ ಬಂಧನ 113 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿಕೊಂಡಿದ್ದು,LJP 8 ಕ್ಷೇತ್ರಗಳಲ್ಲಿ ಮುನ್ನಡೆ ಇದ್ದು ಇನ್ನುಳಿದ ಸ್ವತಂತ್ರಪಕ್ಷದಿಂದ ಸ್ಪರ್ಧಿಸಿದ 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಚುನಾವಣೆ ಫಲಿತಾಂಶ ಏರುಪೇರಾಗುವ ಸಾಧ್ಯತೆ ಕಂಡು ಬರುತ್ತಿದೆ.
ಫಲಿತಾಂಶ ಪೂರ್ವ ಹಲವು ಮಾಧ್ಯಮ ಸಂಸ್ಥೆಗಳು ಚುನಾವಣೆ ಫಲಿತಾಂಶ ಕುರಿತು ತಿಳಿಸಿದ್ದ ಅಂಕಿ ಅಂಶಗಳಲ್ಲಿ ಉಲ್ಟಾಪಲ್ಟಾ ಆಗುಬ ಸಾಧ್ಯತೆ ಕಂಡು ಬರುತ್ತಿದೆ.