ಪ್ರಮುಖ ಸುದ್ದಿ

ವಿದ್ಯಾರ್ಥಿನಿಯರ 8 ಬೈಕಿಗೆ ಬೆಂಕಿ! ಬೆಂಕಿ ಇಟ್ಟವರು ಗಂಡಸರಾ?

ಕಲಬುರಗಿ: ನಗರದ ಮಹಾತ್ಮ ಬಸವೇಶ್ವರ ಬಡಾವಣೆಯಲ್ಲಿರುವ ಖಾಸಗಿ ಮಹಿಳಾ ಹಾಸ್ಟೆಲ್ ಆವರಣದಲ್ಲಿ ನಿಲ್ಲಿಸಲಾಗಿದ್ದ 8 ಬೈಕ್ ಗಳು ಸುಟ್ಟು ಕರಕಲಾದ ಘಟನೆ ನಡೆದಿದೆ. ನಿನ್ನೆ ರಾತ್ರಿ ವೇಳೆ ಕಿಡಿಗೇಡಿಗಳು ಬೈಕ್ ಗಳಿಗೆ ಬೆಂಕಿಯಿಟ್ಟು ಎಸ್ಕೇಪ್ ಆಗಿದ್ದಾರೆಂದು ತಿಳಿದು ಬಂದಿದೆ.

ಲೇಡಿಸ್ ಪಿಜಿಯಲ್ಲಿದ್ದ ವಿದ್ಯಾರ್ಥಿನಿಯರ ಒಟ್ಟು 8 ಬೈಕ್ ಗಳು ಬೆಂಕಿಗಾಹುತಿ ಆಗಿವೆ. ವಿದ್ಯಾರ್ಥಿನಿಯರು ಘಟನೆ ತಿಳಿದು ಅಗ್ನಿ ಶಾಮಕದಳಕ್ಕೆ ತಿಳಿಸುವಷ್ಟರಲ್ಲಿ ಅಗ್ನಿ ಅನಾಹುತ ನಡೆದು ಹೋಗಿದೆ. ಎಮ್.ಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂಥ ಘಟನೆಗಳು ಮರುಕಳಿಸದಂತೆ ಲೇಡೀಸ್ ಪಿಜಿಗಳಿಗೆ ಬಿಗಿ ಭದ್ರತೆ ಒದಗಿಸಬೇಕೆಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button