ವಿನಯ ವಿಶೇಷ

ಮಧುಮೇಹ ನಿವಾರಣೆ ಸೇರಿದಂತೆ ಬಹು ಉಪಯೋಗಿ ಬಿಲ್ವಪತ್ರೆ

ಮಧುಮೇಹ ನಿವಾರಣೆ ಸೇರಿದಂತೆ ಬಹು ಉಪಯೋಗಿ ಬಿಲ್ವಪತ್ರೆ

ಬಿಲ್ವಪತ್ರೆ, ಮಧುನಾಶನಿ, ಬೇವಿನಸೊಪ್ಪು , ನುಗ್ಗೆ ಸೊಪ್ಪುಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿ, ಇದಕ್ಕೆ ಒಣಗಿಸಿದ ಹಾಗಲಕಾಯಿ ಚೂರ್ಣ ಮತ್ತು ಹುರಿದ ಮೆಂತ್ಯೆದ ಚೂರ್ಣವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಇಟ್ಟುಕೊಳ್ಳಬೇಕು.

ಈ ಚೂರ್ಣವನ್ನು ಮಧುಮೇಹ ಸಮಸ್ಯೆ ಇರುವವರು ಒಂದು ಸಲಕ್ಕೆ ಮೂರು ಚಮಚೆಯಂತೆ ದಿನಕ್ಕೆ ಮೂರು ಬಾರಿ ನೀರಿನೊಂದಿಗೆ ಸೇವಿಸುತ್ತಿರಬೇಕು. ಇದರಿಂದ ಮಧುಮೇಹ ನಿಯಂತ್ರಣಗೊಂಡು ಪ್ರಯೋಜನವಾಗುತ್ತದೆ.

ಅಥವಾ ಅಗಸೆ ಸೊಪ್ಪು , ಬಿಲ್ವ ಪತ್ರೆ ಸೊಪ್ಪು ಮತ್ತು ನಾಗದಾಳಿ ಸೊಪ್ಪನ್ನು ಸಹ ಸಮಪ್ರಮಾಣದಲ್ಲಿ ಅರೆದು ತೆಗೆದ ರಸವನ್ನು ದಿನದಲ್ಲಿ ಎರಡು ಬಾರಿ ಅರ್ಧ ಬಟ್ಟಲಿನಂತೆ ಕುಡಿಯಬೇಕು. ಇದರಿಂದಲೂ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗಲಿದೆ.

ಬಿಲ್ವಪತ್ರೆ, ಮಧುನಾಶಿನಿ, ತುಂಬೆ ಎಲೆ , ಬೇವಿನ ಕುಡಿ, ಕರಿಹಾಗಲ ಸೊಪ್ಪು – ಇವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಡಬೇಕು. ಪ್ರತಿದಿನ ಒಂದು ಚಮಚೆ ಚೂರ್ಣವನ್ನು ಬಿಸಿ ನೀರಿನಲ್ಲಿ ಸೇರಿಸಿ ಕುಡಿಯಬೇಕು. ಇದನ್ನು ಮೂರು ತಿಂಗಳ ಕಾಲ ಮಾಡದಲ್ಲಿ ಮಧುಮೇಹ ರೋಗ ಗುಣವಾಗಲಿದೆ. ನಿರಂತರ ಆಗಾಗ ಈನೆ ಮದ್ದು ಸೇವನೆ ಮಾಡಿದ್ದಲ್ಲಿ ಮಧುಮೇಹ ರೋಗವೆನಿಸುವದಿಲ್ಲ.

ಅಲ್ಲದೆ ಒಂದು ಹಿಡಿ ಬಿಲ್ವಪತ್ರೆ, ಒಂದು ಹಿಡಿ ಬೇವಿನ ಎಲೆ ಮತ್ತು ಅರ್ಧ ಹಿಡಿ ತುಳಸಿ ಎಲೆ ಇವನ್ನು ನೀರು ಸೇರಿಸದೆ ನುಣ್ಣಗೆ ಅರೆದು ಗುಳಿಗೆಗಳಾಗಿ ಮಾಡಿಡಬೇಕು. ಪ್ರತಿ ದಿನ ಬೆಳಗ್ಗೆ ಒಂದು ಗುಳಿಗೆಯನ್ನು ಸ್ವಲ್ಪ ನೀರಿನೊಡನೆ ಸೇವಿಸುತ್ತಿದ್ದರೆ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ.

ಮಕ್ಕಳ ಸಮಸ್ಯೆಗಳು : ಸಣ್ಣ ಮಕ್ಕಳಲ್ಲಿ ಹಲ್ಲು ಮೂಡುವ ಸಮಯದಲ್ಲಿ ಉಂಟಾಗುವ ಭೇದಿಗಳನ್ನು ತಡೆಗಟ್ಟಲು ಹೀಗೆ ಮಾಡಿ – ನಾಲ್ಕು ಚಮಚೆಯ ಬಿಲ್ವದ ಹಣ್ಣಿನ ತಿರುಳನ್ನು ಒಂದು ಲೋಟ ನೀರಿಗೆ ಬೆರೆಸಿ ನಿಧಾನವಾಗಿ ಕುದಿಸಬೇಕು. ಅದು ಕಾಲು ಲೋಟವಾದಾಗ ತಣಿಸಿ, ಶೋಧಿಸಿ ಒಂದು ಚಮಚೆ ಜೇನುತುಪ್ಪ ಸೇರಿಸಿ ಮೂರು ಪಾಲು ಮಾಡಿ ಒಂದು ದಿನದಲ್ಲಿ ಕುಡಿಸಬೇಕು.

ಬಿಲ್ವಪತ್ರೆಯ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ನಂತರ ಹುರಿದು ಚೂರ್ಣ ಮಾಡಬೇಕು. ಅರ್ಧ ಚಮಚೆ ಜೇನುತುಪ್ಪದಲ್ಲಿ ಈ ಚೂರ್ಣವನ್ನು ನಾಲ್ಕು ಚಮಚೆ ಕಲೆಸಿ ಮಕ್ಕಳಿಗೆ ಕೊಟ್ಟರೆ ಶೀತ, ಕೆಮ್ಮು , ಗಂಟಲು ನೋವು ನಿವಾರಣೆಯಾಗುತ್ತವೆ.

ಜ್ವರದ ಸಮಸ್ಯೆಗಳು : ಯಾವುದೇ ಬಗೆಯ ಜ್ವರವಿದ್ದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ.

ಮಲೇರಿಯಾ ಸಮಸ್ಯೆ ಇದ್ದಾಗ ಬಿಲ್ವದ ಬೇರಿನ ತೊಗಟೆಯ ಕಯವನ್ನು ಮಾಡಿ ಕುಡಿಯುತ್ತಿರಬೇಕು. ಮಧ್ಯಭಾರತದ ಬಸ್ತಾರ್ ನ ಆದಿವಾಸಿಗಳು ಜ್ವರದ ಸಮಸ್ಯೆ ಇದ್ದಾಗ ಬಿಲ್ವದ ಬೇರಿನ ತೊಗಟೆಯ ಕಷಾಯವನ್ನು ಮದ್ದಾಗಿ ಬಳಸುತ್ತಾರೆ. ಸಾಮಾನ್ಯ ಬಗೆಯ ಜ್ವರಗಳಲ್ಲಿ ಬಿಲ್ವದ ಬೇರಿನ ಕಷಾಯವನ್ನು ಕೊತ್ತಂಬರಿ ಪುಡಿಯೊಡನೆ ಸೇವಿಸುತ್ತಿದ್ದರೆ ಪ್ರಯೋಜನವಾಗುತ್ತದೆ.

ಶ್ವಾಸಕೋಶದ ತೊಂದರೆಗಳಿಗೆ ಎಲೆಗಳ ಕಷಾಯ ಒಳ್ಳೆಯದು. ಬಿಲ್ವಪತ್ರೆ ಬರಿ ಶಿವನ‌‌ ಪೂಜೆಗೆ ಮಾತ್ರ ಯೋಗ್ಯವಲ್ಲದೆ ವಿವಿಧ ರೋಗಗಳಿಗೆ ಮನೆ ಮದ್ದಾಗಿದೆ.

ಅಲ್ಲದೆ ಧಾರ್ಮಿಕ ಪೂಜಾ ವಿಧಿ ವಿಧಾನಗಳಲ್ಲಿ ಬಿಲ್ವಪತ್ರೆ ಮಹತ್ವದ ಪಾತ್ರವಹಿಸುತ್ತದೆ. ಅದರ ಬಳಕೆ ತಿಳಿದಿರಬೇಕಷ್ಟೆ.

-ಗಿರಿಧರ ಶರ್ಮಾ. ಜ್ಯೋತಿಷಿ. ಶ್ರೀರಂಗಪಟ್ಟಣ.9945098262

Related Articles

Leave a Reply

Your email address will not be published. Required fields are marked *

Back to top button