ಪ್ರಮುಖ ಸುದ್ದಿವಿನಯ ವಿಶೇಷ

ಬಿಲ್ವಪತ್ರೆ ಮಹತ್ವ ಏನು? ಗೊತ್ತಾ.? ಬಿಲ್ವಪತ್ರೆ ಎಲೆ ಸೇವನೆಯಿಂದ ಶುಗರ್, ಬಿಪಿ ನಾರಮಲ್

ಬಿಲ್ವಪತ್ರೆ ಎಲೆ ಸೇವನೆಯಿಂದ ಹಲವಾರು ಪ್ರಯೋಜನೆ ಓದಿ

ಬಿಲ್ವಪತ್ರೆ ಮಹತ್ವ ಏನು? ಗೊತ್ತಾ.? ಬಿಲ್ವಪತ್ರೆ ಎಲೆ ಸೇವನೆಯಿಂದ ಶುಗರ್, ಬಿಪಿ ನಾರಮಲ್
ಬಿಲ್ವಪತ್ರೆ ಎಲೆ ಸೇವನೆಯಿಂದ ಹಲವಾರು ಪ್ರಯೋಜನೆ ಓದಿ

ಮಲ್ಲಿಕಾರ್ಜುನ ಮುದ್ನೂರ

ವಿನಯವಾಣಿ ವಿಶೇಷಃ
ಬಿಲ್ವಪತ್ರೆ ಶಿವನಿಗೆ ಇಷ್ಟವಾದದ್ದು, ಈ ವೃಕ್ಷವನ್ನು ಶ್ರೀ ವೃಕ್ಷ ಅಂಥಲೂ ಕರೆಯುತ್ತಾರೆ.
ಇದರಲ್ಲಿ ಸಾಕ್ಷಾತ್ ಶ್ರೀ ಲಕ್ಷ್ಮಿ ದೇವಿ ನೆಲೆಸಿದ್ದಾಳೆಂದು ಹಿಂದೂಗಳು ನಂಬಿದ್ದಾರೆ.

ಪರಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಅತ್ಯಂತ ಪವಿತ್ರವೆಂದು ಪುರಾಣಕಾಲದಿಂದಲೂ ಪೂಜಿಸುತ್ತಾರೆ.

ಪರಮೇಶ್ವರನಿಗೆ ಬಿಲ್ವಪತ್ರೆಯನ್ನು ಉಪಯೋಗಿಸಿ ಅಭಿಷೇಕ ಮಾಡುವುದರಿಂದ ಪರಮಾನಂದವನ್ನು ಹೊಂದುತ್ತಾನೆ. ಅದರಿಂದ ನಮಗೆ ಶುಭ ಮಂಗಲಕರ ಎನ್ನುತ್ತಾರೆ ಪೂರ್ವಿಕರು.

ಎಲ್ಲಿ ಶಿವನ ದೇವಾಲಯವಿದೆ ಅಲ್ಲಿ ಬಿಲ್ವಪತ್ರೆ ಗಿಡ ಇರುತ್ತದೆ.
ಇದು ಆರೋಗ್ಯಕ್ಕೂ ಕೂಡ ಅಷ್ಟೇ ಉಪಯೋಗ.

ಬಿಲ್ವಪತ್ರೆಯ ಪ್ರಯೋಜನೆಗಳುಃ
ಚರ್ಮರೋಗ.. ಅಲ್ಸರ್..ಸೇರಿದಂತೆ ಹಲವಾರು ರೀತಿಯ ರೋಗಗಳಿಗೆ ಇದು ಮದ್ದು.

ಚರ್ಮರೋಗ ಸಮಸ್ಯೆಗೆ ಇದು ತುಂಬಾ ಉಪಯೋಗಕಾರಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರಷ್ ಮಾಡದೆ ಎರಡು ಎಲೆಗಳನ್ನು ಚೆನ್ನಾಗಿ ಜಗಿದು ತಿಂದು ನೀರು ಕುಡಿಯುವುದರಿಂದ ಕ್ರಮೇಣ ಚರ್ಮದ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತದೆ.

ಗ್ಯಾಸ್ಟಿಕ್ ಮತ್ತೆ ಅಜೀರ್ಣ ಸಮಸ್ಯೆಯೂ ಗುಣಮುಖವಾಗಲಿದೆ.

ಅಲ್ಲದೆ ಮಂಡಿ ನೋವಿಗೆ…ಬಿಲ್ವಪತ್ರೆ ಕಾಯಿಯನ್ನು ಬೆಂಕಿಯಲ್ಲಿ ಚೆನ್ನಾಗಿ ಸುಟ್ಟು ನಂತರ ಅದರ ತಿರುಳನ್ನು ಮಂಡಿ ನೋವು ಇರೋ ಜಾಗಕ್ಕೆ ಹಚ್ಚಿದರೆ ಬೇಗನೆ ಮಂಡಿ ನೋವು ವಾಸಿಯಾಗಲಿದೆ.

ಬಿಪಿ ಮತ್ತೆ ಶುಗರಗೆ ಮಾತ್ರೆ ತಿಂದು ತಿಂದು ಸಾಕಾಗಿದೆ ಅಂದ್ರೆ. ಒಮ್ಮೆ ಬಿಲ್ವಪತ್ರೆಯನ್ನು ಮೂರು ತಿಂಗಳವರೆಗೆ ಸೇವನೆ ಮಾಡಿ ನೋಡಿ ಶುಗರ್, ಬಿಪಿ ಎಷ್ಟೊಂದು ಕಂಟ್ರೋಲ್ ಬಂದಿರುತ್ತದೆ. 15-20 ದಿವಸದಲ್ಲಿಯೇ ಚಕ್ ಮಾಡಿಸಿ ರಿಸಲ್ಟ್ ನೋಡಬಹುದು..

ಬಿಲ್ವಪತ್ರೆ ಎಲೆಗಳನ್ನು ಜಜ್ಜಿ ಕಷಾಯ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಜೀವನದಲ್ಲಿ ಶುಗರ್ ಬಿಪಿ ಬರೋದೇ ಇಲ್ವಂತೆ.

ಮತ್ತು ಚಳಿಗಾಲದಲ್ಲಿ ಬರುವ ಜ್ವರ ನೆಗಡಿ, ಕೆಮ್ಮುಗೆ ಇದು ರಾಮಬಾಣ ಮೂರು ಎಲೆಗಳು ಮೆಣಸು ಶುಂಠಿ ಕೊತ್ತಂಬರಿ ಬೀಜ ಎಲ್ಲಾನು ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಸುಸ್ತು ಕೂಡ ಕಡಿಮೆಯಾಗುತ್ತದೆ..
ತಲೆ ನೋವು ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ದೊರೆಯಲಿದೆ.

ಅಷ್ಟೆ ಅಲ್ಲದೆ ಹೊಟ್ಟು, ಕೂದಲು ಉದುರುವುದು ಬಿಳಿ ಕೂದಲು ಸಮಸ್ಯೆ ಇರುವವರು ವಾರದಲ್ಲಿ ಎರಡು ಬಾರಿ ಬಿಲ್ವಪತ್ರೆ ಎಲೆಗಳನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

Related Articles

Leave a Reply

Your email address will not be published. Required fields are marked *

Back to top button