ಪ್ರಮುಖ ಸುದ್ದಿ
ಗಡಿಯಲ್ಲಿ ಸವಾಲೆದುರಿಸಲು ನಮ್ಮ ಸೇನೆ ಸಿದ್ಧವಿದೆ – ಬಿಪಿನ್ ರಾವತ್
ನವದೆಹಲಿ: ನೆರೆ ದೇಶ ಪಾಕಿಸ್ತಾನವೂ ಜಮ್ಮು ಕಾಶ್ಮೀರದ ಗಡಿಯಲ್ಲಿ ಸೇನಾಬಲವನ್ನು ಹೆಚ್ಚಿಸಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ 370 ವಿಧಿಯನ್ನು ಭಾರತ ಸರ್ಕಾರ ರದ್ದುಗೊಳಿಸಿದ್ದು ಮುಂಜಾಗೃತ ಕ್ರಮವಾಗಿ ಜಮ್ಮು ಕಾಶ್ಮೀರದಲ್ಲಿ ಭಾರೀ ಸೇನೆಯನ್ನು ನಿಯೋಜಿಸಿತ್ತು. ಭಾರತದ ಕ್ರಮವನ್ನು ತೀವ್ರ ವಿರೋಧಿಸಿರುವ ಪಾಕಿಸ್ತಾನ ಇದೀಗ ಗಡಿಯಲ್ಲಿ ಭಾರೀ ಸೇನೆ ನಿಯೋಜಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಯಾವುದೇ ಸುರಕ್ಷಾ ಸವಾಲು ಎದುರಿಸಲು ನಮ್ಮ ಸೇನೆ ಸಿದ್ಧವಾಗಿದೆ ಎಂದಿದ್ದಾರೆ. ಪ್ರತಿ ದೇಶಗಳು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದು ಸಾಮಾನ್ಯ. ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯ ಇಲ್ಲ ಎಂದು ರಾವತ್ ಹೇಳಿದ್ದಾರೆ. ಆ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.