ಪ್ರಮುಖ ಸುದ್ದಿ
ನಿಂತ ಲಾರಿಗೆ ಪೊಲೀಸ್ ಜೀಪ್ ಡಿಕ್ಕಿ, ಡಿಎಸ್ಪಿ ಹುಗಿಬಂಡಿಗೆ ಸಣ್ಣಪುಟ್ಟ ಗಾಯ, ಚಾಲಕ ಪಾರು
ನಿಂತ ಲಾರಿಗೆ ಪೊಲೀಸ್ ಜೀಪ್ ಡಿಕ್ಕಿ, ಡಿಎಸ್ಪಿ ಹುಗಿಬಂಡಿಗೆ ಸಣ್ಣಪುಟ್ಟ ಗಾಯ, ಚಾಲಕ ಪಾರು
ಯಾದಗಿರಿಃ ಸುರಪುರದಿಂದ ಶಹಾಪುರದ ಭೀಮರಾಯನ ಗುಡಿಗೆ ಕರ್ತ್ಯವ್ಯ ಮುಗಿಸಿ ಮನೆಗೆ ಹೊರಟಿದ್ದ ವೇಳೆ ನಿಂತ ಲಾರಿಯೊಂದಕ್ಕೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದ ಘಟನೆ ನಸುಕಿನ ಜಾವ 4 ಗಂಟೆ ಸುಮಾರಿಗೆ ಜಿಲ್ಲೆಯ ಶಹಾಪುರದ ಇಂಡಸ್ಟ್ರೀಯಲ್ ಏರಿಯಾ ಸಮೀಪ ರಾಜ್ಯ ಹೆದ್ದಾರಿ ಮೇಲೆ ನಡೆದಿದೆ.
ಅದೃಷ್ಟವಶಾತ್ ಚಾಲಕ ಪಾರಾಗಿದ್ದು, ಜೀಪನಲ್ಲಿದ್ದ ಸುರಪುರ ವಲಯ ಡಿಎಸ್ಪಿ ವೆಂಕಟೇಶ ಹುಗಿಬಂಡಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕಲ್ಬುರ್ಗಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ ಎನ್ನಲಾಗಿದೆ.