ಡಿಸಿಎಂ ಸೇರಿ ನಾಲ್ಕು ಜನ ಸಚಿವರ ರಾಜೀನಾಮೆ ಪಡೆಯಲು ಅಮಿತ್ ಶಾ ಸೂಚನೆ.?
ಅನರ್ಹರಿಗೆ ಶುಭ ಸಂದೇಶ ನೀಡಿದ ಅಮಿತ್ ಶಾ.!
ವಿವಿ ಡೆಸ್ಕ್ಃ ಉಪ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಭಾರಿ ಬದಲಾವಣೆ ಆಗುವ ಲಕ್ಷಣಗಳು ಕಂಡು ಬರುತ್ತಿವೆ. ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅನರ್ಹ ಶಾಸಕರ ಹಿತ ಕಾಪಾಡಲು ಮುಂದಾಗಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ.
ಈಗಾಗಲೇ ಉಪ ಚುನಾವಣೆ ಸಮರದಲ್ಲಿ 5 ಜನ ಅನರ್ಹರು ಸೋಲಲಿದ್ದಾರೆ ಎಂಬುದು ಅಮಿತ್ ಶಾ ಲೆಕ್ಕಾಚಾರವಾಗಿದೆಯಂತೆ. ಅದರಂತೆ ಸೋತ ಅನರ್ಹ ಶಾಸಕರು ಸೇರಿದಂತೆ ಗೆದ್ದವರಿಗೂ ಮತ್ತು ಚುನಾವಣೆ ಖಣದಲ್ಲಿ ಇರದ ಅನರ್ಹ ಶಾಸಕರಿಗೆ ಸಚಿವ ಸ್ಥಾನದ ಹುದ್ದೆ ನೀಡಲು ಅಮಿತ್ ಶಾ ಚಿಂತನೆ ನಡೆಸಿದ್ದಾರೆ.
ಆ ಹಿನ್ನಲೆಯಲ್ಲಿ ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ಸೂಚನೆ ನೀಡಿದ್ದಾರೆ ಎನ್ನಲಾದ, ರಾಜ್ಯ ಇಬ್ಬರು ಡಿಸಿಎಂ ಸೇರಿದಂತೆ ಸಚಿವರಾದ ಮಾಧುಸ್ವಾಮಿ, ಸಿಟಿ ರವಿ, ಪ್ರಭು ಚವ್ಹಾಣ ಮತ್ತು ಕೋಟ ಶ್ರೀನಿವಾಸ ಅವರಿಂದ ರಾಜೀನಾಮೆ ಪಡೆದು ಅನರ್ಹರಿಗೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಅಷ್ಟೆ ಅಲ್ಲದೆ ಬರೋಬ್ಬರಿ 6 ಜನ ಬಿಜೆಪಿ ಎಂಎಲ್ಸಿಗಳ ರಾಜೀನಾಮೆಯು ಪಡೆಯುವಂತೆ ಅನರ್ಹರಿಗೆ ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಬೇಕೆಂಬ ಪ್ಲಾನ್ ಅನ್ನು ಅಮಿತ್ ಶಾ ಮಾಡಿದ್ದಾರೆ ಎನ್ನಲಾಗಿದೆ.