ಪ್ರಮುಖ ಸುದ್ದಿ

ಯಡಿಯೂರಪ್ಪ ವಿರುದ್ದ “ಕತ್ತಿ” ಹಿಡಿದು ನಿಂತ ಉಕ ಶಾಸಕರು.!

ಸಿಎಂ ಬದಲಾಯಿಸಲು ನಡೆಯುತ್ತಿದೆಯೇ ಕಸರತ್ತು..?

ವಿವಿ ಡೆಸ್ಕ್ಃ ಕೊರೊನಾ ವೈರಸ್ ಮತ್ತು ಮಿಡತೆ ಹಾವಳಿ ನಡುವೆಯೇ ಆಡಳಿತಾರೂಢ ಬಿಜೆಪಿಯ ಉತ್ತರ ಕರ್ನಾಟಕ ಶಾಸಕರು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ‌ ನಿವಾಸದಲ್ಲಿ ಸಭೆ ಸೇರಿರುವದು ಕುತುಹಲಕ್ಕೆ ಕಾರಣವಾಗಿದೆ.

ಈ ಸಭೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕ ಉಮೇಶ ಕತ್ತಿ, ರಾಜುಗೌಡ, ದತ್ತಾತ್ರೇಯ ಪಾಟೀಲ್, ರಾಜಕುಮಾರ ಪಾಟೀಲ್ ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.

ನಿಖರವಾಗಿ‌ ಎಷ್ಟು ಜನ‌ ಶಾಸಕರು ಸೇರಿದ್ದರೆಂಬ ಮಾಹಿತಿ ಇಲ್ಲ. ಮುಖ್ಯವಾಗಿ ಇಲ್ಲಿ ಉಮೇಶ ಕತ್ತಿ ಮತ್ತಿ‌ ಬಾನಗೌಡ ಪಾಟೀಲ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಪುನರಚನೆ ಕುರಿತು ಮಾತುಕತೆಗಳು ನೆದಿವೆ ಎನ್ನಲಾಗಿದೆ. ಸಮರ್ಪಕವಾಗಿ ಕೆಲಸ ಮಾಡದ ಕೆಲ ಸಚಿಬರನ್ನು ತೆಗೆದು ಪಕ್ಷದ ಸಂಘಟನೆಗೆ ಬಳಸಿಕೊಳ್ಳಲು ಚಿಂತಿಸಲಾಗುತ್ತಿದ್ದು, ಹೊಸದಾಗಿ ಸಂಪುಟಕ್ಕೆ ಹಲವರನ್ನು‌ ಸಚಿವರಾಗಿಸಲು ಸಿಎಂ ಮುಂದಾಗಿದ್ದಾರೆ ಎಂಬ ವಿಷಯ ತಿಳಿದು ಶಾಸಕರು ಇತರರು ಸಭೆ ಸೇರಿ ಚರ್ಚಿಸಲಾಗುತ್ತಿದೆ ಎನ್ನಲಾಗಿದೆ.

ಹೀಗಾಗಿ ಪಕ್ಷದ ಶಾಸಕರಲ್ಲಿ ಸಚಿವರಾಗುವ ಕನಸು ಹೊಂದಿರುವ ಹಲವರು ಶತಾಯಗಥಾಯ ಸಚಿವರಾಗಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಯಾವುದಕ್ಕೂ ರಾಜ್ಯದ ಕಮಲ‌ಪಾಳೆಯದಲ್ಲಿ‌ ನಡೆಯುತ್ತಿರುವ ಬೆಳವಣಿಗೆ ಕುತೂಹಲ ಮೂಡಿಸಿದೆ.

Related Articles

Leave a Reply

Your email address will not be published. Required fields are marked *

Back to top button