ಪ್ರಮುಖ ಸುದ್ದಿ

ಕ್ರಿಕೇಟ್, ಭಜನೆಯಲ್ಲಿ ತೊಡಗಿಸಿಕೊಂಡ ಬಿಜೆಪಿ ಶಾಸಕರು..!

ಕ್ರಿಕೇಟ್ ಇನ್ ರೆಸಾರ್ಟ್

ಯಾರದೋ ದುಡ್ಡು ಎಂಎಲ್‍ಎಗಳ ಜಾತ್ರೆ..

MLA ಗಳ ಜೊತೆ ಕ್ರಿಕೇಟ್ ಆಟವಾಡಿದ ಯಡಿಯೂರಪ್ಪ

ವಿನಯವಾಣಿ ಡೆಸ್ಕ್ಃ ರಾಜ್ಯದ ರಾಜಕೀಯ ವಾತಾವರಣ ನಾಗರಿಕರಲ್ಲಿ ಅಸಹ್ಯ ಮೂಡಿಸುತ್ತಿರುವದು ಒಂದಡೆಯಾದರೆ, ವಿವಿಧ ಪಕ್ಷಗಳಿಂದ ಗೆಲುವು ಸಾಧಿಸಿದ ವಿಧಾನಸಭೆ ಮೆಟ್ಟಿಲೇರಿ ಎಂಎಲ್‍ಎ ಎನಿಸಿಕೊಂಡ ಮಹಾಶಯರು ರೆಸಾರ್ಟ್‍ನಲ್ಲಿ ಹಾಯಾಗಿ ಕಾಲ ಕಳೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಅತೃಪ್ತ ಶಾಸಕರು ಮುಂಬೈನಲ್ಲಿ ರೆಸಾರ್ಟ್‍ವೊಂದರಲ್ಲಿ ಮೋಜು ಮಾಡುತ್ತಿದ್ದರೆ, ಬೆಂಗಳೂರಿನ ವಿವಿಧ ರೆಸಾರ್ಟ್‍ನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಸೇರಿದಂತೆ ಬಿಜೆಪಿ ಶಾಸಕರು ರೆಸಾರ್ಟ್‍ನಲ್ಲಿ ಕಳೆದ 11 ದಿನದಿಂದ ಕಾಲ ಕಳೆಯುತ್ತಿದ್ದಾರೆ.

ರೆಸಾರ್ಟ್ ನಲ್ಲಿ ಬಿ.ಎಸ್,ಯಡಿಯೂರಪ್ಪ ಬಿಜೆಪಿ ಶಾಸಕರ ಜೊತೆ ಕ್ರಿಕೇಟ್ ಆಡುತ್ತಿರುವದು.

ವಿಶೇಶವೆಂದರೆ, ಇಂದು ರಮಡ ರೆಸಾರ್ಟ್‍ನಲ್ಲಿದ್ದ ಬಿಜೆಪಿ ರಾಜ್ಯಧ್ಯಕ್ಷ ಮಾಜಿ ಮುಖುಮಂತ್ರಿ ಯಡಿಯೂರಪ್ಪ ತಮ್ಮ ಶಾಸಕರೊಡನೆ ಮಂಗಳವಾರ ರೆಸಾರ್ಟ್ ಆವರಣದಲ್ಲಿ ಕ್ರಿಕೇಟ್ ಆಡುವ ಮೂಲಕ ಒತ್ತಡದಿಂದ ಹೊರಬಂದು ನಿರಮ್ಮಳಾಗಿ ಕಾಲ ಕಳೆಯುತ್ತಿರುವದು ಕಂಡು ಬಂದಿತು.

ಇದೇ ವೇಳೆಗೆ ಮಂಗಳವಾರ ದೀಪ ಮುಡಿಸುವ ಸಮಯದಿಂದಲೇ ಬಿಜೆಪಿ ಶಾಸಕರು ಚಂದ್ರಗ್ರಹಣ ನಿಮಿತ್ತವಾಗಿಯೋ ಅಥವಾ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿ ಎಂಬ ಕಾರಣಕ್ಕೋ ಗೊತ್ತಿಲ್ಲ ಭಜನಾ ಕಾರ್ಯಕ್ರಮ ಆಯೋಜಿಸುವ ಮೂಲಕ ದೇವರ ನಾಮ ಸ್ಮರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಜೆಪಿಯವರು ಪುಣ್ಯಕ್ಕೆ ಆಧ್ಯಾತ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷದ ಸಿದ್ಧಾಂತ ತಕ್ಕ ಅನುಕರಣೆಯಾದರೂ ನಡೆಯುತ್ತಿದೆ ಎನ್ನಬಹುದ ಅಲ್ವೆ.?

ಭಜನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿಟಿ ರವಿ, ರೇಣುಕಾಚಾರ್ಯ ಹೊನ್ನಳ್ಳಿ, ರಾಜೂಗೌಡ ಸುರಪುರ ಸೇರಿದಂತೆ ಇತರರು ಕಂಡು ಬಂದರು. ಭಜನೆ ಮಾಡುತ್ತಿರುವ ವಿಡಿಯೋ ತುಣುಕು ಈಗ ವೈರಲ್ ಆಗಿದೆ.

ಒಂದಡೆ ಅತೃಪ್ತ ಶಾಸಕರು ಮುಂಬೈನಲ್ಲಿ ರೆಸಾರ್ಟ್‍ವೊಂದರಲ್ಲಿ ಆರಾಮವಾಗಿ ಮೋಜಿನಲ್ಲಿದ್ದಾರೆ. ಕಾಂಗ್ರೆಸ್ ಮತ್ತು ತೆನೆ ಶಾಸಕರು ಸಹ ರೆಸಾರ್ಟ್‍ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಇಲ್ಲಿ ಸರ್ಕಾರ ಬೀಳುತ್ತಿದೆ ಮತ್ತೊಂದು ಸರ್ಕಾರ ಅಧಿಕಾರಕ್ಕೆ ಏರುತ್ತಿದೆ.. ಯಾವುದೇ ಲೆಕ್ಕ ನಡೆದರೂ ಅಧಿಕಾರದ ಮದದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾತ್ರ ಮಾಡಲಾಗುತ್ತಿದೆ. ಯಾರು ಅಧಿಕಾರ ಹಿಡಿದರೂ ಖರ್ಚು ಮಾತ್ರ ನಾಡಿನ ಜನತೆ ಕಟ್ಟಿದ ತೆರಿಗೆಯಿಂದಲೇ..ತಾನೆ.!

ಈ ರಾಜಕೀಯ ಡೊಂಬರಾಟದಲ್ಲಿ ಯಾರು ಗೆದ್ದರೂ ಸೋತರೂ ರಾಜಕಾರಣಿಗಳಿಗೆ ಲಾಭ ಜನರಿಗೆ ನಷ್ಟ ಯಾಕಂದ್ರೆ ಹಾಳಾಗೋದು ನಮ್ಮ ತೆರಿಗೆ ಹಣ ಅಷ್ಟೆ….!

Related Articles

One Comment

  1. Good day! This is kind of off topic but I need some advice from
    an established blog. Is it very difficult to set up your own blog?
    I’m not very techincal but I can figure things out pretty quick.
    I’m thinking about making my own but I’m not sure where to start.
    Do you have any ideas or suggestions? Cheers

    Feel free to visit my web-site :: live online forex trading room

Leave a Reply

Your email address will not be published. Required fields are marked *

Back to top button