ಸಿ.ಟಿ. ಸಿಎಂ ಬಹುತೇಕ ಖಚಿತ.?
ನೂತನ ಮುಖ್ಯಮಂತ್ರಿಯಾಗಿ ಸಿ.ಟಿ.ರವಿ ಬಹುತೇಕ ಖಚಿತ.?
ಬೆಂಗಳೂರಃ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಸುವ ವ್ಯವಸ್ಥೆ ಬಹುತೇಕ ಖಚಿತವಾಗಿರುವಷ್ಟೆ, ನೂತನ ಸಿಎಂ ಆಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ನೇಮಿಸುವದು ಅಷ್ಟೆ ಖಚಿತವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಿಜೆಪಿ ಹೈಕಮಾಂಡ ಮಟ್ಟದಲ್ಲಿ ಸಿ.ಟಿ.ರವಿ ಅವರ ಹೆಸರನ್ನು ಫೈನಲ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಬಹುತೇಕ ಇಂದು ಅಥವಾ ನಾಳೆ ಅಂತಿಮ ಸ್ವರೂಪ ಪಡೆಯಲಿದೆ ಎಂದು ವಿಶ್ವಾಸನೀಯ ಮೂಲಗಳು ವಿನಯವಾಣಿಗೆ ತಿಳಿಸಿವೆ.
ಅಲ್ಲದೆ ಉಪ ಮುಖ್ಯಮಂತ್ರಿಗಳಾಗಿ ಬಸವರಾಜ ಬೊಮ್ಮಾಯಿ, ಡಾ.ಅಶ್ವಥನಾರಾಯಣ ಹೆಸರು ಅಂತಿಮವಾಗಿದ್ದು, ಇನ್ನೊಂದು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಪಾಟೀಲ್ ಯತ್ನಾಳ ಅವರ ಹೆಸರು ಕೇಳಿ ಬರುತ್ತಿದ್ದು, ಲಕ್ಷ್ಮಣ ಸವದಿ ಮತ್ತು ಶ್ರೀರಾಮುಲು ಅವರ ಪ್ರಯತ್ನವು ಮುಂದುವರೆದಿದೆ ಎನ್ನಲಾಗಿದೆ.
ಇನ್ನೂ 2 ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರಲಿದ್ದು, RSS ಮೂಲದವರನ್ನೆ ಸಿಎಂ ಮಾಡುವ ತೀರ್ಮಾನಿಸಲಾಗಿದ್ದು, ಸಂಘದಿಂದಲೇ ಬೆಳೆದುಬಂದ ಸಿ.ಟಿ.ರವಿ ಅವರೇ ಸೂಕ್ತ ವ್ಯಕ್ತಿ ಎಂದು ನಿರ್ಣಯಿಸಲಾಗಿದೆ ಎಂದು ಹೇಳಲಾಗುತ್ತಿದೆ. ಯಾವುದಕ್ಕೂ ಕಾಯ್ದು ನೋಡಬೇಕಿದೆ.