ಬಿಜೆಪಿ ಉರ್ಫ್ ಡೋಂಗಿ ಪಕ್ಷಃ ಸಿಎಂ ಸಿದ್ಧರಾಮಯ್ಯ
ಬಸವಣ್ಣನವರ ನಾಡಿನಲ್ಲೂ ಬಿಜೆಪಿ ಕೋಮುವಾದದ ಕಿಡಿ ಹಚ್ಚಲು ಯತ್ನಿಸಿ ವಿಫಲವಾಗಿದೆ- ರಾಹುಲ್ ಗಾಂಧಿ
ರಾಯಚೂರ: ಬಿಜೆಪಿ ಸುಳ್ಳುಗಾರರ ಪಕ್ಷ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ದಲಿತರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದೆ. ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವದ ಹಾದಿಯಲ್ಲಿ ನಡೆಯುತ್ತಿದೆ. ಆದರೆ, ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದೆ.
ಬಸವಣ್ಣನವರ ನಾಡಿನಲ್ಲೂ ಕೋಮುವಾದದ ಬೆಂಕಿ ಹಚ್ಚುತ್ತಿದೆ. ಆ ಮೂಲಕ ಮತ ವಿಭಜನೆ ಮಾಡಲು ಹೊರಟಿದೆ. ಆದರೆ, ಬಿಜೆಪಿಯ ಕೋಮುವಾದಿ ನೀತಿ ಇಲ್ಲಿ ಸಫಲವಾಗೋದಿಲ್ಲ ಎಂದು ನುಡಿದರು.
ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯ ಮಾತನಾಡಿ ಬಿಜೆಪಿ ವಿರುದ್ಧ ಕಿಡಿ ಕಾರಿದರು. ಬಿಜೆಪಿಯಲ್ಲಿ ಇರುವವರು ಡೋಂಗಿ ನಾಯಕರು ಎಂದರು. ಬಿಜೆಪಿ ಅಂದರೆ ಡೋಂಗಿ ಪಕ್ಷ ಅಂದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೇರಿದಂತೆ ಸಚಿವರು, ಶಾಸಕರು ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷದ ಪ್ರಮುಖರು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.