ಪ್ರಮುಖ ಸುದ್ದಿ
ದೋಸ್ತಿ ನಾಯಕರು ಗೈರು, ಸದನ ಖಾಲಿ ಖಾಲಿ – ಬಿಜೆಪಿ ನಾಯಕರು ಕಿಡಿಕಿಡಿ
ಬೆಂಗಳೂರು: ಸದನ ಆರಂಭವಾಗಿ ಒಂದು ತಾಸು ಕಳೆದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಬಹುತೇಕ ಶಾಸಕರು ಕಲಾಪಕ್ಕೆ ಬಾರದ ಕಾರಣ ಸದನ ಖಾಲಿಖಾಲಿಯಾಗಿದೆ. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅದ್ಯಕ್ಷ ದಿನೇಶ ಗುಂಡೂರಾವ್ ಸೇರಿದಂತೆ ಪ್ರಮುಖ ನಾಯಕರು ಸಹ 11 ಗಂಟೆಯಾದರೂ ಸಹ ಸದನಕ್ಕೆ ಗೈರಾಗಿದ್ದರು.
ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ ಕಾಂಗ್ರೆಸ್, ಜೆಡಿಎಸ್ ನಾಯಕರ ವಿರುದ್ಧ ಕಿಡಿ ಕಾರಿದರು. ಸಮಯಕ್ಕೆ ಸರಿಯಾಗಿ ಬಾರದೆ ಸದನಕ್ಕೆ ಅಗೌರವ ತೋರಿದ್ದಾರೆ. ತಮಗೆ ಬೇಕಾದಗ ಸದನ ನಡೆಯಬೇಕು, ಬೇಡವಾದಾಗ ಇಲ್ಲ ಎಂಬ ಮನೋಸ್ಥಿತಿಯಲ್ಲಿದ್ದಾರೆಂದು ಕಿಡಿಕಾರಿದರು.