ಯೋಗದಿಂದ ದೇಹ, ಮನಸ್ಸು ಸದೃಢ – ಯೋಧ ದುರ್ಗಪ್ಪ ನಾಯಕ
ಯಾದಗಿರಿಃ ನಿತ್ಯ ಯೋಗ ಮಾಡುವದನ್ನು ರೂಢಿಸಿಕೊಳ್ಳಬೇಕು. ಯೋಗದಿಂದ ದೇಹ ಮಾತ್ರವಲ್ಲದೆ ಮಾನಸಿಕವಾಗಿಯು ಸದೃಢತೆ ಪಡೆಯಬಲ್ಲೇವು ಎಂದು BSF ಯೋಧ ದುರ್ಗಪ್ಪ ನಾಯಕ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ದಿಗ್ಗಿ ಸಂಗಮೇಶ್ವರ ಮಾರ್ಗ ಮಧ್ಯದಲ್ಲಿ ರವಿವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗೆಳೆಯರ ಬಳಗ ಆಯೋಜಿಸಿದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.

ಮನುಷ್ಯ ಪ್ರಸ್ತುಯ ಒತ್ತಡದ ಬದುಕಿನಲ್ಲಿ ಸಿಲುಕಿ ನರಳುವಂತಾಗಿದೆ. ಒತ್ತಡ ನಿವಾರಣೆಗೆ ಯೋಗವೇ ಮದ್ದು, ನಿತ್ಯ ಬೆಳಗ್ಗೆ ಯೋಗ ಅಭ್ಯಾಸ ಮಾಡಿದಲ್ಲಿ ಯಾವುದೇ ರೊಗ ರುಜಿನಗಳು ಸಮೀಪ ಸುಳಿಯುವದಿಲ್ಲ. ಮಾನಸಿಕವಾಗಿ ಆರೋಗ್ಯಯುತ ಜೀವನ ನಡೆಸಲು ಯೋಗ ಸಹಕಾರಿಯಾಗಲಿದೆ.
ನಮ್ಮ ದೇಶದ ಪಾರಂಪರಿಕ ಋಷಿಮುನಿಗಳ ಕೊಡುಗೆಯಾದ ಯೋಗ ಇಂದು ಜಗತ್ತಿನಾದ್ಯಂತ ವಿಶ್ವ ದಿನಾಚರಣೆಯಾಗಿ ಆಚರಿಸುತ್ತಿರುವದು ನಮಗೆಲ್ಲ ಹೆಮ್ಮೆ ತರುವತಂಹದ್ದು, ಅಂದಾಜು 177 ದೇಶಕ್ಕೂ ಹೆಚ್ಚು ದೇಶಗಳಲ್ಲಿ ಇಂದು ಯೋಗ ದಿನಾಚರಣೆ ಆಚರಣೆ ಮಾಡುತ್ತಿದ್ದಾರೆ.
ಪ್ರತಿಯೊಬ್ಬರು ಮಕ್ಕಳಿಗೆ ಯೋಗ ಅಭ್ಯಾಸ ಮಾಡುವ ಮೂಲಕ ಇಡಿ ದೇಶವನ್ನು ನಿರೋಗಿಯಾಗಿ ಆರೋಗ್ಯಯುತ ಶಕ್ತಿ ಶಾಲಿಯಾಗಿ ಕಟ್ಟಲು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಗಧೀಶ ಹೊನ್ಕಲ್ ಎಲ್ಲರಿಗೂ ಯೋಗ ಅಭ್ಯಾಸ ಹೇಳಿಕೊಟ್ಟರು. ನಂತರ ಸಾಮೂಹಿಕವಾಗಿ ಧ್ಯಾನ ಮಾಡಲಾಯಿತು.
ರಾಜಕುಮಾರ ಚಿಲ್ಲಾಳ, ಮಲ್ಲಿಕಾರ್ಜುನ ಮುದ್ನೂರ, ಬಸವರಾಜ ತಳವಾರ, ಶರಣಗೌಡ ಕಟ್ಟಿಮನಿ, ರಾಜು ಪತ್ತಾರ (ಬೊಮ್ಮನಳ್ಳಿ), ಮಲ್ಲಿಕಾರ್ಜುನ ಬುಕಿಸ್ಟಗಾರ, ಉಮೇಶ ಬಾಗೇವಾಡಿ, ಬಸವರಾ ಚೌದ್ರಿ, ರಮೇಶ ನಗನೂರ, ಶಶಿಧರ ಹಂಗರಗಿ ಇತರರಿದ್ದರು.