ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದವರಿಗೆ ಪ್ರತಿಫಲ ಗ್ಯಾರಂಟಿ- ತಳವಾರ
ಶಹಾಪುರಃ ಪ್ಯಾಟಿ ಮತ್ತು ಕರಿಬಸವಗೆ ಸನ್ಮಾನ
ಶಹಾಪುರಃ ಬಿಜೆಪಿ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುವಿಕೆ, ಪಕ್ಷದ ರಾಜ್ಯ ಪದಾಧಿಕಾರಿಗಳು ನೀಡುವ ಕಾರ್ಯಸೂಚಿಯನ್ನು ಅಚ್ಚುಕಟ್ಟಾಗಿ ಅನುಷ್ಠಾನ ಗೊಳಿಸುವದು ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಪದಾಧಿಕಾರಿಗಳ ಜವಬ್ದಾರಿ ಯಾಗಿದೆ ಎಂದು ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಯುವ ಮೋರ್ಚಾ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಈಚೆಗೆ ಯುವ ಮೊರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ನೇಮಕಗೊಂಡ ಯುವ ಮುಖಂಡ ಕರಿಬಸವ ಬಿರಾಳ ಮತ್ತು ಎಸ್.ಟಿ.ಮೊರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ನೇಮಕಗೊಂಡ ಮುಖಂಡ ಮರೆಪ್ಪ ಪ್ಯಾಟಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ದುಡಿದವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಅಲ್ಲದೆ ಅಧಿಕಾರ ದುಡಿಮೆಯ ಪ್ರತಿಫಲವಾಗಿ ದೊರೆಯಲಿದೆ. ಇದಕ್ಕೆ ನಾನು ಸೇರಿದಂತೆ ರಾಜ್ಯದಲ್ಲಿ ಬಹುತೇಕರು ಸಾಕ್ಷಿಯಾಗಿದ್ದಾರೆ.
ಕಾರಣ ಯುವಕರಿಗೆ ಮುಂದೆ ಒಳ್ಳೆಯ ಭವಿಷ್ಯವಿದ್ದು, ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಮುಂದೆ ನೋಡಿ ಕೆಲಸ ಮಾಡಿದ್ದಲ್ಲಿ ಅದರ ಪ್ರತಿಫಲ ದೊರಡಯುವಲ್ಲಿ ಎರಡು ಮಾತಿಲ್ಲ ಎಂದು ಮತ್ತೊಮ್ಮೆ ಹೇಳಿದರು.
ಈ ಸಂದರ್ಭದಲ್ಲಿ. ಡಾ.ಚಂದ್ರಶೇಖರ್ ಸುಬೇದಾರ ಸೇರಿದಂತೆ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು.